ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಮಾಲಾಡಿ, ಸೋಣಂದೂರು ಶಕ್ತಿ ಕೇಂದ್ರ ಪಂಚಾಯಿತಿಮಟ್ಟದ ಅಭ್ಯಾಸ ವರ್ಗ ಸಭೆ ಮಾಲಾಡಿ ಕೊಲ್ಪೆದಬೈಲುವಿನಲ್ಲಿ ನಡೆಯಿತು.
ಹಿರಿಯ ಕಾರ್ಯಕರ್ತ ಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪಕ್ಷದ ಹಿರಿಯ ಕಾರ್ಯಕರ್ತ ಪದ್ಮನಾಭ ಶೆಟ್ಟಿ ಅರ್ಕಜೆ ಮಾತನಾಡಿದರು. ಶಾಸಕ ಹರೀಶ್ ಪೂಂಜ ಪಕ್ಷ ಸಂಘಟನೆ, ಕಾರ್ಯಚಟುವಟಿಕೆ ಕುರಿತು ಸಮಾಲೋಚನೆ ನಡೆಸಿದರು.
ಪ್ರಮುಖರಾದ ರವಿ ಇಳಂತಿಲ, ತಣ್ಣೀರುಪಂಥ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಜಯಾನಂದ ಕಲ್ಲಾಪು, ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಸುಧೀರ್ ಸುವರ್ಣ ಬೈಠಕ್ ನೀಡಿದರು. ಕುವೆಟ್ಟು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಚಂದ್ರ ಕಾಂತ ಗೌಡ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಜಿಲ್ಲಾ ಭಾಜಪ ಕಾರ್ಯದರ್ಶಿ ವಸಂತಿ ಮಚ್ಚಿನ, ಮಡಂತ್ಯಾರ್ ಗ್ರಾಪಂ ಉಪಾಧ್ಯಕ್ಷ ಗೋಪಾಲಕೃಷ್ಣ, ಸಿಎ ಬ್ಯಾಂಕ್ ಅಧ್ಯಕ್ಷ ಶ್ರೀ ಜೋಯಲ್ ಮೆಂಡೋನ್ಸ, ಪ್ರಮುಖರಾದ ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕರ್ಕೇರ ಸ್ವಾಗತಿಸಿದರು. ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತುಳಸಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.