ಜಿಲ್ಲೆ

'777 ಚಾರ್ಲಿ' ಸಿನಿಮಾ ಸ್ಫೂರ್ತಿ; ಶ್ವಾನದಳದ ನಾಯಿಗೂ ಅದೇ ನಾಮಕರಣ..

ಮಂಗಳೂರು: ಕಿರಣ್​ ರಾಜ್ ನಿರ್ದೇಶನ, ರಕ್ಷಿತ್ ಶೆಟ್ಟಿ ಅಭಿನಯ ಹಾಗೂ ನಿರ್ಮಾಣದ '777 ಚಾರ್ಲಿ' ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಗೊಂಡು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವುದಷ್ಟೇ ಅಲ್ಲದೆ, ಅತ್ಯುತ್ತಮ ಪ್ರಕ್ರಿಯೆಯನ್ನು ಪಡೆದು ಮೆಚ್ಚುಗೆಗೂ ಪಾತ್ರವಾಗುತ್ತಿದೆ.

ನಾಯಿಯೊಂದರ ಜತೆಗೆ ಕಥಾನಾಯಕನ ಒಡನಾಟದ ಕಥೆ ಹೊಂದಿರುವ, ಚಿತ್ರದುದ್ದಕ್ಕೂ ಚಾರ್ಲಿ ಹೆಸರಿನ ನಾಯಿಯ ಪಾತ್ರವೂ ಇದ್ದು, ಈ ಸಿನಿಮಾ ಈಗಾಗಲೇ ಶ್ವಾನಪ್ರಿಯರು ಮಾತ್ರವಲ್ಲದೆ, ಸಿನಿಪ್ರಿಯರ ಶ್ಲಾಘನೆಗೆ ಒಳಗಾಗಿದೆ.

ಇದೀಗ '777 ಚಾರ್ಲಿ' ಚಿತ್ರದಿಂದ ಪ್ರೇರಣೆ ಪಡೆದ ಮಂಗಳೂರು ಪೊಲೀಸರು ಶ್ವಾನದಳದ ನಾಯಿಗೂ ಅದೇ ನಾಮಕರಣ ಮಾಡಿದ್ದಾರೆ. ಲ್ಯಾಬ್ರೋಡರ್​ ರಿಟ್ರೀವರ್ ತಳಿಯ ಮೂರು ತಿಂಗಳ ನಾಯಿಮರಿಗೆ ಚಾರ್ಲಿ ಎಂದು ನಾಮಕರಣ ಮಾಡಿ, ಕೇಕ್​ ತಿನಿಸಿ ಸಂಭ್ರಮಿಸಿದ್ದಾರೆ. ತರಬೇತಿ ಬಳಿಕ ಈ 'ಚಾರ್ಲಿ' ಬಾಂಬ್ ನಿಷ್ಕ್ರಿಯ ದಳವನ್ನು ಸೇರಲಿದೆ.