ಜಿಲ್ಲೆ

ಟ್ರಾಫಿಕ್​ ಕಿರಿಕಿರಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಮಹಿಳೆಯ ಈ ಫೋಟೋ

ಬೆಂಗಳೂರು: ಐಟಿಹಬ್​, ಸಿಲಿಕಾನ್​ ಸಿಟಿ ಎಂದೇ ಖ್ಯಾತಿ ಪಡೆದಿರುವ ಉದ್ಯಾನನಗರಿ ಬೆಂಗಳೂರು ಅನೇಕ ಭಾರಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಮತ್ತು ಹಲವರಿಗೆ ಅನೇಕ ರೀತಿಯಲ್ಲಿ ತನ್ನ ಒಡಲಲ್ಲಿ ಆಶ್ರಯ ನೀಡಿದೆ.

ಪ್ರತಿನಿತ್ಯ ವಾಹನ ಸವಾರರಿಗೆ ಸಂಚಾರ ದಟ್ಟಣೆಯಿಂದಾಗುವ ಕಿರಿಕಿರಿಯನ್ನು ತಪ್ಪಿಸಲು ಸರ್ಕಾರಗಳು ಅನೇಕ ರೀತಿಯ ಯೋಜನೆಗಳನ್ನು ಜಅರಿಗೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

ಫೋಟೋ ವೈರಲ್​

ಇನ್ನು ಇತ್ತೀಚಿನ ಘಟನೆಯೊಂದರಲ್ಲಿ ಮಹಿಳೆ ಒಬ್ಬರು ತಮ್ಮ ಆಫೀಸಿಗೆ ತೆರಳುವ ವೇಳೆ ಮಹಿಳೆ ಒಬ್ಬರು ಲ್ಯಾಪ್​​ಟಾಪ್​ ಹಿಡಿದು ಕೆಲಸ ಮಾಡುತ್ತಿರುವುದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನು ಈ ಫೋಟೋವನ್ನು ಟ್ವಿಟರ್​ ಬಳಕೆದಾರ ನಿಹಾರ್​​ ಲೋಹಿಯಾ ಎಂಬುವವರು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ ಮತ್ತು ನೆಟ್ಟಿಗರು ಭಿನ್ನ-ವಿಭಿನ್ನ ಕಮೆಂಟ್​ಗಳನ್ನು ಹಾಕುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.