ಜಿಲ್ಲೆ

ಶವಸಂಸ್ಕಾರಕ್ಕೆ ಹೋಗಿದ್ದವ ಐದು ದಿನಗಳ ಬಳಿಕ ಶವವಾಗಿ ಪತ್ತೆ!

Webdesk - Ravikanth

ರಾಯಚೂರು: ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆಂದು ಹೋಗಿದ್ದವನೊಬ್ಬ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾದಂಥ ಪ್ರಕರಣವೊಂದು ವರದಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಇಂಥದ್ದು ದುರಂತ ನಡೆದಿದೆ. ಜೆಸ್ಕಾಂ ಸಿಬ್ಬಂದಿ ಈಶ್ವರ (30) ಶವವಾಗಿ ಪತ್ತೆಯಾದ ವ್ಯಕ್ತಿ.

ಈಶ್ವರ ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದ ವ್ಯಕ್ತಿ. ಈತ ಮಾ. 21ರಂದು ಯರಗುಂಟಿ ಗ್ರಾಮದಲ್ಲಿದ್ದ ಶವಸಂಸ್ಕಾರಕ್ಕೆಂದು ಹೋಗಿದ್ದ. ಅಲ್ಲಿಂದ ಮರಳುವಾಗ ಕೃಷ್ಣ ಬಲದಂಡೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದ.

ಆದರೆ ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಈಶ್ವರ ಕೊಚ್ಚಿ ಹೋಗಿದ್ದು, ಎಷ್ಟೇ ಹುಡುಕಾಡಿದರೂ ದೇಹ ಸಿಕ್ಕಿರಲಿಲ್ಲ. ಈಶ್ವರನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಲಿಂಗಸುಗೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಇಂದು ದೇವದುರ್ಗ ತಾಲ್ಲೂಕಿನ ಸೋಮನಮರಡಿಯ ಕಾಲುವೆ ಗೇಟ್​​ನಲ್ಲಿ ಶವ ಪತ್ತೆಯಾಗಿದೆ.