ಬೆಳ್ಮಣ್ ಜೆಸಿಐ 44ನೇ ವರ್ಷಾಚರಣೆ ಹಾಗೂ ಪೂರ್ವಾಧ್ಯಕ್ಷರ ಸಮ್ಮಿಲನದಲ್ಲಿ ಘಟಕಾಧ್ಯಕ್ಷೆ ಸರಿತಾ ದಿನೇಶ್ ಸುವರ್ಣ ಮಾತನಾಡಿದರು 
ಜಿಲ್ಲೆ

ಸಹಕಾರದಿಂದ ಸಮಾಜಸೇವೆ : ರಾಕೇಶ್ ಹೊಸಬೆಟ್ಟು ಅಭಿಮತ ; ಜೆಸಿಐ ಪೂರ್ವಾಧ್ಯಕ್ಷರ ಸಮ್ಮಿಲನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಒಂದು ಸಂಸ್ಥೆ ಹತ್ತಾರು ವರ್ಷಗಳ ಕಾಲ ಸಮಾಜಸೇವೆಯಲ್ಲಿ ನಿರಂತರ ತೊಡಗಿಕೊಳ್ಳಬೇಕಾದರೆ ಆ ಸಂಸ್ಥೆಯಲ್ಲಿ ದುಡಿಯುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಮಾತ್ರ ಸಾಧ್ಯ. ಎಲ್ಲರೂ ಸಮಾನ ಮನಸ್ಥಿತಿಯಲ್ಲಿ ನಮ್ಮ ಸಂಸ್ಥೆಯೆಂಬ ಮನೋಭಾವ ಬೆಳೆಸಿಕೊಂಡಾಗ ಸಂಘ ಸಂಸ್ಥೆಗಳು ನೂರಾರು ವರ್ಷ ಉಳಿಯಲು ಸಾಧ್ಯ ಎಂದು ಜೆಸಿಐ ವಲಯ 15ರ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು ಹೇಳಿದರು.

ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಬೆಳ್ಮಣ್ ಜೆಸಿಐನ 44ನೇ ವರ್ಷಾಚರಣೆ ಹಾಗೂ ಪೂರ್ವಾಧ್ಯಕ್ಷರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆಸಿಐ ಬೆಳ್ಮಣ್ ಪೂರ್ವಾಧ್ಯಕ್ಷ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶರತ್ ರಾವ್ ಮಾತನಾಡಿದರು. ಘಟಕಾಧ್ಯಕ್ಷೆ ಸರಿತಾ ದಿನೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಕಾರ್ಯದರ್ಶಿ ಸೌಜನ್ಯಾ ಕೋಟ್ಯಾನ್, ಯುವ ಜೇಸಿ ಅಧ್ಯಕ್ಷೆ ಪೂರ್ವಿ ರಾವ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ, ಘಟಕದ ಪೂರ್ವಾಧ್ಯಕ್ಷರಾದ ಪ್ರಕಾಶತ್ಮ, ತುಕಾರಾಮ ಶೆಟ್ಟಿ, ಜಯಂತ್ ರಾವ್, ಸತೀಶ್ ಕುಮಾರ್, ಸುರೇಶ್ ರಾವ್, ವಾಲ್ಟರ್ ಮೊಂತೆರೋ, ರಾಜೇಂದ್ರ ಭಟ್, ಅನಿಲ್ ಕುಮಾರ್, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಸುಧಾಕರ್ ರಾವ್, ಮುರಳೀಧರ ಜೋಗಿ, ಶರತ್ ರಾವ್, ದೀಪಕ್ ಕಾಮತ್, ರಘುರಾಮ ರಾವ್, ಸತೀಶ್ ಕೋಟ್ಯಾನ್, ದಿನೇಶ್ ಸುವರ್ಣ, ರಘುನಾಥ ನಾಯಕ್, ಸುಭಾಸ್ ಕುಮಾರ್, ಸಂದೀಪ್ ವಿ.ಪೂಜಾರಿ ಅಬ್ಬನಡ್ಕ, ರವಿರಾಜ್ ಶೆಟ್ಟಿ, ಪ್ರದೀಪ್ ಆಚಾರ್ಯ, ಸತ್ಯನಾರಾಯಣ ಭಟ್, ವೀನೇಶ್ ಅಮೀನ್, ಸತೀಶ್ ಪೂಜಾರಿ ಅಬ್ಬನಡ್ಕ ಉಪಸ್ಥಿತರಿದ್ದರು.