ಕೋಟ: ಕರಾವಳಿ ಕಡಲ ತಡಿಯಲ್ಲಿ ನೆಲೆಯೂರಿದ ಶಿರಸಿಮಾರಿಕಾಂಬೆ ಪ್ರಸಿದ್ಧ ಕ್ಷೇತ್ರವಾಗಿ ಭಕ್ತರನ್ನು ಹರಸುತ್ತಿದ್ದಾಳೆ, ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಮೂಡಲಿ ಎಂದು ಕೋಟದ ಅಮೃತೇಶ್ವರಿ ದೇಗುಲ ಧರ್ಮದರ್ಶಿ ಆನಂದ್ ಸಿ.ಕುಂದರ್ ಹೇಳಿದರು.
ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬಾ ದೇಗುಲ ಪುನಃ ಪ್ರತಿಷ್ಠಾಪನೆ, ವಾರ್ಷಿಕ ವರ್ಧಂತ್ಯುತ್ಸವ ಬ್ರಹ್ಮಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ದೇಗುಲ ಧಾರ್ಮಿಕ ವಿಧಿವಿಧಾನಗಳನ್ನು ಮಧುಸೂದನ ಬಾಯರಿ ನೇತೃತ್ವದಲ್ಲಿ ದೇಗುಲ ಅಧ್ಯಕ್ಷ ರಮೇಶ್ ಪೂಜಾರಿ ದಂಪತಿ ನೆರವೇರಿಸಿದರು. ದೇವಿ ದರ್ಶನವನ್ನು ನಂದಿ ಪೂಜಾರಿ ನೆರವೇರಿಸಿದರು. ಅರ್ಚಕರಾದ ನಂದ್ಯಪ್ಪ ಪೂಜಾರಿ, ಸಹ ಅರ್ಚಕ ಚಂದ್ರ ಪುತ್ರನ್ ಬಾರ್ಕೂರು, ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಮಂಜುನಾಥ ನಾಯ್ಕ, ಕೋಶಾಧಿಕಾರಿ ನಾಗಪ್ಪ ಪೂಜಾರಿ, ವಿನಯ ಕುಂದರ್, ಉಪಾಧ್ಯಕ್ಷರಾದ ಚಂದ್ರ ಪುತ್ರನ್, ಜತೆ ಕಾರ್ಯದರ್ಶಿ ರಾಜೇಂದ್ರ, ಅರುಣ್ ಸಾಲಿಯಾನ್, ಸತೀಶ್ ಮೆಂಡನ್, ಗೌರವ ಸಲಹೆಗಾರ ಸಂಜೀವ ಆರ್.ಕುಂದರ್, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ಕೃಷ್ಣ ಪುತ್ರನ್, ಉದಯ್ ತಿಂಗಳಾಯ, ಪ್ರಭಾಕರ್ ತಿಂಗಳಾಯ, ರಘು ಪೂಜಾರಿ, ಅಶೋಕ್ ಪೂಜಾರಿ, ಅಣ್ಣಪ್ಪ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.
ದೇಗುಲದಲ್ಲಿ ಪ್ರಾರ್ಥನೆ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಸ್ಥಾನ ಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ, ಬಲಿ, ರಾಕ್ಷೋಘ್ನ ಹೋಮ, ಅಧಿವಾಸ ಪೂಜೆ, ಅಧಿವಾಸ ಹೋಮ, ರತ್ನನ್ಯಾಸ ಪೂರ್ವಕ ಶ್ರೀದೇವಿ ಪ್ರತಿಷ್ಠಾಪನೆ ತದಂಗ ನ್ಯಾಸಾದಿಗಳು ಶನಿವಾರ ರಾತ್ರಿ ನಡೆದವು. ಭಾನುವಾರ ಪಂಚವಿಂಶತಿ ದ್ರವ್ಯ ಕಲಶಪೂರ್ವಕ 108 ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾಪ್ರಸಾದ ವಿತರಣೆ, ಅಪರಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು.