ಒಡ್ಡೋಲಗ ಯಕ್ಷಗಾನ ವಿಶೇಷ ಸ್ಪರ್ಧಾ ಕಾರ್ಯಕ್ರಮ ಉದ್ಯಮಿ ಅಜಿತ್ ಕೆರೆಕಾಡು ಉದ್ಘಾಟಿಸಿದರು. ಕೆರೆಕಾಡು ಯಕ್ಷಕಲಾ ಫೌಂಡೇಶನ್‌ನ ಅಧ್ಯಕ್ಷ ಜಯಂತ್ ಅಮೀನ್, ಕೆರೆಕಾಡು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆರೆಕಾಡು, ಯಕ್ಷಗಾನ ಕಲಾವಿದರಾದ ಜಿತೇಶ್ ಕುಲಾಲ್ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ಯಕ್ಷಗಾನದಿಂದ ಧಾರ್ಮಿಕ, ಸಾಂಸ್ಕೃತಿಕ ಉನ್ನತಿ : ಅಜಿತ್ ಕೆರೆಕಾಡು

ಸೌಮ್ಯ ಆರ್

ಮೂಲ್ಕಿ: ಯಕ್ಷಗಾನದಿಂದ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ತಿಳಿವಳಿಕೆ ಸಹಿತ ಕನ್ನಡ ಭಾಷಾ ಪಾಂಡಿತ್ಯ ಬೆಳೆಯುತ್ತಿದ್ದು ಈ ಕಲಾಪ್ರಾಕಾರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಲ್ಲಿ ಧಾರ್ಮಿಕ, ಸಾಂಸ್ಕೃತಿಕ ಉನ್ನತಿ ಸಾಧ್ಯವಿದೆ ಎಂದು ಉದ್ಯಮಿ ಅಜಿತ್ ಕೆರೆಕಾಡು ಹೇಳಿದರು.

ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಸಂಯೋಜನೆಯಲ್ಲಿ ಒಡ್ಡೋಲಗ ಯಕ್ಷಗಾನ ವಿಶೇಷ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀಕ್ಷೇತ್ರ ದೇಂದಡ್ಕದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡಿ, ಸ್ಪರ್ದಾ ಕೂಟಗಳ ಆಯೋಜನೆಯಿಂದ ಧಾರ್ಮಿಕ ಉನ್ನತಿಗಾಗಿ ಸಹಕರಿಸುವ ಸತ್‌ಕಾರ್ಯಕ್ಕೆ ದೇವರ ಆಶೀರ್ವಾದ ಲಭ್ಯವಾಗುವುದು ಎಂದರು.

ಕೆರೆಕಾಡು ಯಕ್ಷಕಲಾ ಫೌಂಡೇಶನ್‌ನ ಅಧ್ಯಕ್ಷ ಜಯಂತ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಕೆರೆಕಾಡು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆರೆಕಾಡು, ಯಕ್ಷಗಾನ ಕಲಾವಿದರಾದ ಜಿತೇಶ್ ಕುಲಾಲ್ ಸೂರಿಂಜೆ, ಶ್ರೀಪಾದ್ ಭಟ್, ಫೌಂಡೇಶನ್‌ನ ದುರ್ಗಾಪ್ರಸಾದ್, ರೇಷ್ಮಾ ಗಣೇಶ್, ಪ್ರೇಮಲತಾ, ಅಭಿಜಿತ್, ಅಜಿತ್, ಅನ್ವಿತಾ, ವಾಣಿ, ವಿಜೇತಾ ಶೆಟ್ಟಿ, ಉಷಾ ಪರಮೇಶ್ವರ, ಶ್ರೇಯಸ್, ನೀಲೇಶ್ ಆಚಾರ್ಯ, ಶಶಾಂಕ್, ದಿವ್ಯಶ್ರೀ, ಸಮೀಕ್ಷಾ, ನರೇಶ್ ಉಪಸ್ಥಿತರಿದ್ದರು.

ಮೂಕಾಂಬಿಕಾ ಸ್ವಾಗತಿಸಿ, ಧನಂಜಯ ಶೆಟ್ಟಿಗಾರ್ ಪ್ರಸ್ತಾವಿಸಿ, ಯಶೋದಾ ಅಜಿತ್ ವಂದಿಸಿ, ಉಷಾ ನರೇಂದ್ರ ನಿರೂಪಿಸಿದರು.