ಜಿಲ್ಲೆ

ಕೊಲ್ಲಮೊಗ್ರು ದೋಲನ ಮನೆಯಲ್ಲಿ ನೇಮೋತ್ಸವ

ಸೌಮ್ಯ ಆರ್

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ದೋಲನ ಮನೆಯ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವ ಭಕ್ತಿ ಸಡಗರದಿಂದ ನಡೆಯಿತು. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಮಾರ್ಗದರ್ಶನದೊಂದಿಗೆ ಎರಡು ದಿನಗಳ ಕಾಲ ದೈವಗಳಿಗೆ ತಂಬಿಲ ಸೇವೆ ಮತ್ತು ನೇಮೋತ್ಸವ ನಡೆಯಿತು.

ಶ್ರೀ ಗಣಪತಿ ಹವನ, ದೈವಗಳಿಗೆ ತಂಬಿಲ, ಹರಿಸೇವೆ, ಕೆಂಚಿರಾಯನ ಪೂಜೆ, ರಾತ್ರಿ ದೈವಗಳ ಭಂಡಾರ ತೆಗೆದು ಜೋಡು ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು. ಬಳಿಕ ಪಂಜುರ್ಲಿ, ಧರ್ಮದೈವ ರುದ್ರಚಾಮುಂಡಿ, ಶ್ರೀ ಗುಳಿಗ ದೈವ, ಶ್ರೀ ಅಂಗಾರ ಬಾಕುಡ ದೈವಗಳ ನೇಮೋತ್ಸವ ನಡೆಯಿತು. ಪ್ರಮುಖರಾದ ಲೋಕಯ್ಯ ಗೌಡ ಸೇರಿದಂತೆ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.