ಪೆರಡಾಲ ಜನಜೀವನ ಶಾಲೆಯ ವಿವಿಧ ಕ್ಲಬ್‌ಗಳನ್ನು ಹೈಯರ್ ಸೆಕೆಂಡರಿ ವಿಭಾಗದ ವಿಜ್ಞಾನ ಶಿಕ್ಷಕ ರಾಜೀವನ್ ಉದ್ಘಾಟಿಸಿ ಮಾತನಾಡಿದರು. ಮುಖ್ಯಶಿಕ್ಷಕಿ ಮಿನಿ, ಅಧ್ಯಾಪಕಿಯರಾದ ಜ್ಯೋತ್ಸ್ನಾ, ವಿದ್ಯಾ ಇದ್ದರು. 
ಜಿಲ್ಲೆ

ನವಜೀವನ ಶಾಲೆಯಲ್ಲಿ ಸಂಘಗಳ ಉದ್ಘಾಟನೆ

ಸೌಮ್ಯ ಆರ್

ಬದಿಯಡ್ಕ: ಪೆರಡಾಲ ನವಜೀವನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ ಸೋಮವಾರ ನಡೆಯಿತು. ಹೈಯರ್ ಸೆಕೆಂಡರಿ ವಿಭಾಗದ ವಿಜ್ಞಾನ ಅಧ್ಯಾಪಕ ರಾಜೀವನ್ ಉದ್ಘಾಟಿಸಿ ಮಾತನಾಡಿ, ವಿವಿಧ ಸಂಘಗಳ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸೂಕ್ತ ಪ್ರತಿಭೆಯನ್ನು ಗುರುತಿಸಲು ಸಾಧ್ಯ. ಈ ಶಾಲೆಯ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ವಿಜ್ಞಾನಿಗಳಾಗಿ ಇಸ್ರೋ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ನಮಗೆ ಹೆಮ್ಮೆಯ ವಿಷಯ ಎಂದರು.

ನಂತರ ವಿಜ್ಞಾನದ ವಿವಿಧ ಪ್ರಯೋಗಗಳನ್ನು ನಡೆಸಿಕೊಟ್ಟರು. ಮುಖ್ಯಶಿಕ್ಷಕಿ ಮಿನಿ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿಯರಾದ ಜ್ಯೋತ್ಸ್ನಾ, ವಿದ್ಯಾ ಕ್ಲಬ್ಬಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಪ್ರಭಾವತಿ ಕೆದಿಲಾಯ ಸ್ವಾಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು ರಾಜೇಶ್ ಅಗಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.