

ಮಂಗಳೂರು: ಬಂಟರ ಸಂಘ ಕಾವೂರು ಇದರ 23ನೇ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಕಾವೂರಿನ ಸಹಕಾರ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಎಂಆರ್ಜಿ ಗ್ರೂಪ್ನ ಸ್ಥಾಪಕಾಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯತು. ಈ ವೇಳೆ ಮಾತನಾಡಿದ ಅವರು, ಸಂಘದ ಜನಪರ ಸಾಮಾಜಿಕ ಕೆಲಸಗಳನ್ನು ಶ್ಲಾಸಿದರು. ಪ್ರತಿಯೊಬ್ಬರೂ ಸಮಾಜದ ಪರ ಚಿಂತನೆ ನಡೆಸಿದರೆ ಕಟ್ಟ ಕಡೆಯ ವ್ಯಕ್ತಿಯ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ಉತ್ತಮ ಪಡಿಸುವ ಜತೆಗೆ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಆನಂದ ಶೆಟ್ಟಿ ಅಡ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಾ. ವೈ ಭರತ್ ಶೆಟ್ಟಿ, ಶ್ರೀ ರಾಮ ಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜಯರಾಜ್ ಬಿ.ರೈ, ಮನಪಾ ವಿಪಕ್ಷ ನಾಯಕ ಟಿ.ಪ್ರವೀಣ್ ಚಂದ್ರ ಆಳ್ವ ಪ್ರಮುಖರಾದ ಸಿ.ಎ .ರಾಮಮೋಹನ್ ರೈ, ವಸಂತ್ ಶೆಟ್ಟಿ, ರವಿರಾಜ್ ಶೆಟ್ಟಿ , ಡಾ. ಪ್ರವೀಣ್ ಕುಮಾರ್ ರೈ ಜಿ.ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಅವಿನಾಶ್ ನಾಯ್ಕ ಬೈಲಾ ತಿದ್ದುಪಡಿಯನ್ನು ಸಭೆಗೆ ಮಂಡಿಸಿದರು. ಕೋಶಾಧಿಕಾರಿ ಲಕ್ಷ್ಮಿ ನಾರಾಯಣ ಶೆಟ್ಟಿ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು. 70 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷರಾದ ತುಕಾರಾಮ್ ಶೆಟ್ಟಿ ತೊಡ್ಲ, ವಾಮನ ಶೆಟ್ಟಿ ಉರುಂದಾಡಿ, ಪ್ರಮುಖರಾದ ನೇಮಿರಾಜ್ ಶೆಟ್ಟಿ ಪಾಂಜಾ, ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ, ಗಿರಿಜಾತೆ ಆರ್ ಭಂಡಾರಿ, ಸಂಘಟನಾ ಕಾರ್ಯದರ್ಶಿ ಚಂದ್ರರಾಜ್ ಶೆಟ್ಟಿ, ಗಣೇಶ್ ಮಲ್ಲಿ, ರವಿಕಲಾ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಮುಗ್ರೋಡಿ, ಸಂಚಾಲಕ ಎಂ.ಎಸ್ ಶೆಟ್ಟಿ ಸರಪಾಡಿ, ಕೋಶಾಧಿಕಾರಿ ಶಂಭು ಶೆಟ್ಟಿ, ಪದಾಧಿಕಾರಿಗಳಾದ ವಿಠ್ಠಲ್ ಆಳ್ವ, ರೇಖಾ ವಿ ಶೆಟ್ಟಿ, ಶ್ಯಾಮಲಾ ಡಿ. ಶೆಟ್ಟಿ,ದಿವಾಕರ್ ಶೆಟ್ಟಿ ಮುಗ್ರೋಡಿ, ದಿನೇಶ್ ಕುಮಾರ್ ಶೆಟ್ಟಿ ಕಾವೂರು, ಚಂದ್ರ ಶೆಟ್ಟಿ ಕೂಳೂರು, ಭಾಸ್ಕರ್ ಕೊಂಡೆ, ಶೀನ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮಲ್ಲರಬೆಟ್ಟು, ಶಿವ ಪ್ರಸಾದ್ ಶೆಟ್ಟಿ, ಮನೋಜ್ ಚಂದ್ರ ಶೆಟ್ಟಿ, ಹರೀಶ್ ಶೆಟ್ಟಿ ಶಿಲ್ಪಾ, ಬಿ.ವಿಠ್ಠಲ ಶೆಟ್ಟಿ, ಹರುಷ ಶೆಟ್ಟಿ, ಹರಿನಾ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಸುಧಾಕರ್ ಆಳ್ವ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸುಜಯಾ ಶೆಟ್ಟಿ ವಂದಿಸಿದರು. ಪ್ರಿಯಾ ಹರೀಶ್ ನಿರೂಪಿಸಿದರು. ಆರಂಭದಲ್ಲಿ ಮಹಿಳಾ ವಿಭಾಗದವರಿಂದ ಭಜನೆ ಹಾಗೂ ಸಭಾ ಕಾರ್ಯಕ್ರಮದ ಅನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.