ಬೆಂಗಳೂರು: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು ದಾಖಲಾತಿ ಸಂಶೋಧನೆ ಮತ್ತು ತರಬೇತಿ ಕೇಂದ್ರ, ಭಾರತೀಯ ಅಂಕಿ-ಅಂಶ ಸಂಸ್ಥೆ, ಮಾಹಿತಿ ಶಾಸ್ತ್ರ, ಜೈನ್ ವಿಶ್ವವಿದ್ಯಾಲಯ, ಪಿಇಎಸ್ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಮ್ಮಿಕೊಂಡಿದೆ.
ನ.14ರಿಂದ 20ರ ವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಇರಲಿದ್ದು, ನಾಳೆ ಸಂಜೆ ಉದ್ಘಾಟನಾ ಕಾರ್ಯಕ್ರಮ ಇರಲಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಟಿ.ಡಿ. ಕೆಂಪರಾಜು ಅವರು ಸಮಾರಂಭ ಉದ್ಘಾಟಿಸಲಿದ್ದು, ಬೆಂಗಳೂರಿನ ಭಾರತೀಯ ಸಾಂಖ್ಯಿಕ ಸಂಸ್ಥೆಯ ಪ್ರಾಧ್ಯಾಪಕ ದಯಾಸಾಗರ್ ಅವರು ಜಯನಗರದ ಇನ್‌ಫರ್ಮ್ಯಾಟಿಕ್ಸ್‌ನಲ್ಲಿ ಪ್ರಾದೇಶಿಕ ಮಾಹಿತಿ ಕುರಿತು ಉದ್ಘಾಟನಾ ಉಪನ್ಯಾಸ ನೀಡಲಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಸುರೇಶ್ ಜಂಗೆ, ಐಐಎಸ್ಸಿಯ ಜಯಕಾಂತ್ ಫ್ರಾನ್ಸಿಸ್, ಜೈನ್ ವಿವಿಯ ರಜನಿ ಜಯರಾಂ, ಮೈಸೂರು ವಿವಿಯ ಪ್ರೊ.ಸಿ.ಪಿ.ಕೃಷ್ಣಕುಮಾರ್, ಪಿಇಎಸ್ ವಿಶ್ವವಿದ್ಯಾಲಯದ ಪ್ರೊ.ಸುದರ್ಶನ್ ಮತ್ತು ತುಮಕೂರಿನ ವಿಶ್ವವಿದ್ಯಾಲಯದ ಪ್ರೊ. ಪರಮಶಿವಮೂರ್ತಿ ಅವರಿಂದ ವಿವಿಧ ಉಪನ್ಯಾಸ ಮಾಲಿಕೆಗಳಿಂದ ನವೆಂಬರ್ 14 ರಿಂದ 20ರವರೆಗೆ ಒಂದು ವಾರದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರೊ.ಎ.ವೈ.ಅಸುಂಡಿ ಅವರು ತಿಳಿಸಿದ್ದಾರೆ.