ಜಿಲ್ಲೆ

ಕಯ್ಯಾರರ ಬದುಕು ಕನ್ನಡಿಗರಿಗೆ ದಾರಿದೀಪ : ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕವಿ ಕಯ್ಯಾರರು ಅಪ್ರತಿಮ ಹೋರಾಟಗಾರರು. ಪಂಪನ ಹಾಗೆ ಕವಿಯೂ ಹೌದು ಕಲಿಯೂ ಹೌದು. ಅವರ ಬದುಕು, ಸಾಹಿತ್ಯ, ಆದರ್ಶಗಳು ಕಾಸರಗೋಡಿನ ಕನ್ನಡಿಗರಿಗೆ ಸದಾ ದಾರಿದೀಪ ಎಂದು ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹೇಳಿದರು.

ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನುಡಿನಮನ ಸಲ್ಲಿಸಿದರು.

ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನರಾವ್ ಬೇಕಲ್, ಸಂಧ್ಯಾ ರಾಣಿ ದಂಪತಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ.ರಮಾನಂದ ಬನಾರಿ, ಡಾ.ಶಿವಾನಂದ ಬೇಕಲ್, ಕವಿ ಡಾ.ವಸಂತ ಕುಮಾರ್ ಪೆರ್ಲ, ಕಲಬುರಗಿ ದೂರದರ್ಶನ ಕೇಂದ್ರದ ವಿಶೇಷ ಕಾರ್ಯಕ್ರಮ ಸಂಯೋಜಕ ಡಾ.ಸದಾನಂದ ಪೆರ್ಲ ಅವರಿಗೆ ಕನ್ನಡ ಭವನದ ‘ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಧಾರ್ಮಿಕ ಮುಂದಾಳು ಡಾ.ವೆಂಕಟ್ರಮಣ ಹೊಳ್ಳ, ಸಾಹಿತಿ ವೈ.ಸತ್ಯನಾರಾಯಣ ಕಾಸರಗೋಡು, ವಕೀಲ ಕೆ.ಸತ್ಯನಾರಾಯಣ ತಂತ್ರಿ, ಕನ್ನಡ ಭವನದ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ರಾವ್ ಕುಂಬಳೆ, ರಾಮಣ್ಣ ದೇಲಂಪಾಡಿ, ವಿಜಯ ಕುಮಾರ್ ಬೆಂಗಳೂರು, ಮಾಲತಿ ಬೆಂಗಳೂರು ಅತಿಥಿಗಳಾಗಿದ್ದರು.

ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಟಕ ಸಂಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ದ.ಕ. ಜಿಲ್ಲಾ ಕನ್ನಡ ಭವನದ ಅಧ್ಯಕ್ಷೆ ರೇಖಾ ಸುಧೇಶ್ ರಾವ್ ವಂದಿಸಿದರು.

ಕವಿಗೋಷ್ಠಿ, ಕುಣಿತ ಭಜನೆ

ಚುಸಾಪ ಕಾಸರಗೋಡು ಜಿಲ್ಲಾ ಟಕದ ಅಧ್ಯಕ್ಷೆ ಶಾರದಾ ಮೊಳೆಯಾರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಯ್ಯಾರರ ಆಯ್ದ ಕವಿತೆಗಳ ಗಾಯನ, ಕೀಕಾನ ವಿಷ್ಣುಪ್ರಿಯ ಮಹಿಳಾ ಸಂದ ಸದಸ್ಯೆಯರಿಂದ ಕುಣಿತ ಭಜನೆ, ಅರ್ಚನಾ ಹೇರೂರು ಅವರಿಂದ ನೃತ್ಯ, ಮೋಕ್ಷಿ ಅವರಿಂದ ಯೋಗ ಪ್ರದರ್ಶನ ನಡೆಯಿತು.