ಜಿಲ್ಲೆ

ಎರಡು ವರ್ಷದ ಮಗುವಿಗೆ ಬಂತೊಂದು ಕರೊನಾ ನೋಟಿಸ್‌!

suchetana

ಮುಂಡರಗಿ (ಗದಗ): ಕರೊನಾ ಸೋಂಕಿತರಾದ ಸಂದರ್ಭದಲ್ಲಿ ಕ್ವಾರಂಟೈಲ್‌ ಮಾಡಲಾಗುವ ವ್ಯಕ್ತಿಗೆ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳನ್ನು ಮೀರುವ ವ್ಯಕ್ತಿಗಳಿಗೆ ನೋಟಿಸ್‌ ನೀಡಲಾಗುತ್ತದೆ.

ಅಂಥದ್ದೇ ಒಂದು ನೋಟಿಸ್‌ ಎರಡು ವರ್ಷದ ಮಗುವಿಗೆ ಗದಗ ಜಿಲ್ಲೆಯ ಮುಂಡರಗಿ ತಹಶೀಲ್ದಾರರು ನೀಡಿದ್ದಾರೆ.

ಇದಕ್ಕೆ ಕಾರಣ ಎಂದರೆ, ಕರೊನಾ ಪಾಸಿಟಿವ್‌ ಬಂದಿದ್ದ ಮಗುವನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಚಿಕಿತ್ಸೆ ಮುಗಿಸಿ ಬಂದ ಮೇಲೆ ಕಡ್ಡಾಯವಾಗಿ 14 ದಿನಗಳವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎನ್ನುವುದು ನಿಯಮ.

ಇದೇ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಸೋಂಕಿತರ ಮೊಬೈಲ್‌ ನಂಬರ್‌ ದಾಖಲಿಸಿಕೊಳ್ಳಲಾಗುತ್ತದೆ. ಇದನ್ನು ಟ್ರ್ಯಾಕ್‌ ಮಾಡಲಾಗುತ್ತದೆ. ಸೋಂಕಿತರ ಜತೆಗೆ ಅವರ ಮನೆಯವರನ್ನೂ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ನಿತ್ಯವೂ ಆ ಕುಟುಂಬದವರು ಮನೆಯಲ್ಲಿ ಹೋಂ ಕ್ವಾರಂಟೈನ್‌ ಆಗಿರುವ ಫೋಟೋಗಳನ್ನು ಸರ್ಕಾರಕ್ಕೆ ಕಳುಹಿಸಬೇಕು.

ಈ ಹಿನ್ನೆಲೆಯಲ್ಲಿ ಮನೆಯಿಂದ ಹೊರಕ್ಕೆ ಬಂದು ನಿಯಮ ಉಲ್ಲಂಘನೆ ಮಾಡಿರುವ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ 2 ವರ್ಷದ ಮಗುವಿಗ ನೋಟಿಸ್‌ ಜಾರಿ ಮಾಡಲಾಗಿದೆ.

ಈ ಮಗುವಿಗೆ ಕರೊನಾ ಸೋಂಕು ತಗುಲಿತ್ತು. ಗುಣಮುಖರಾದ ಮೇಲೆ ಮನೆಗೆ ಕಳುಹಿಸಲಾಗಿತ್ತು. ಮಗುವಿನ ಕುಟುಂಬದವರ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಲಾಗಿತ್ತು. ಮಗು ಪಾಲಕರ ಜತೆ ಹೊರಗೆ ಓಡಾಡಿರುವುದು ಕಂಡ ಹಿನ್ನೆಲೆಯಲ್ಲಿ ಮಗುವಿನ ಹೆಸರಿನಲ್ಲಿ ನೋಟಿಸ್‌ ಜಾರಿಯಾಗಿದೆ.‌ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.