ಮಂಡ್ಯ: ರೆಡ್ ಝೋನ್ನಿಂದ ಚೇತರಿಸಿಕೊಳ್ಳುತ್ತಿದ್ದ ಮಂಡ್ಯಕ್ಕೆ ಮುಂಬೈ ಕರೊನಾ ಸಂಪರ್ಕ ಕಂಟಕವಾಗಿ ಪರಿಣಮಿಸಿದೆ. ಈ ಹಿಂದೆ ತಬ್ಲಿಘಿ ಜಮಾತ್ ಮಂಡ್ಯ ಜಿಲ್ಲೆಯನ್ನು ಕಾಡಿತ್ತು. ಅದು ದೂರವಾಗುತ್ತಿದ್ದಂತೆ ಮತ್ತೊಂದು ಕಂಟಕ ಎದುರಾಗಿದೆ.
ತಬ್ಲಿಘಿಗಳು ಮಂಡ್ಯಕ್ಕೆ ಮೊದಲು ಕರೊನಾ ಸೋಂಕು ತಂದಿದ್ದರು. ತಬ್ಲಿಘಿ ನಂಟಿನಿಂದ ಮಳವಳ್ಳಿಯ 20 ಮಂದಿಗೆ ಸೋಂಕು ತಗುಲಿತ್ತು. ಇದರಿಂದ ಮಂಡ್ಯ ಜಿಲ್ಲೆ ಆತಂಕಗೊಂಡಿತ್ತು. ಇದೀಗ ತಬ್ಲಿಘಿಗಳ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಟ್ಟಿ ನಂಜನಗೂಡಿನ ನಂಜು ಸಹ ಬಹುತೇಕ ನಿವಾರಣೆಯಾಗಿದೆ. ಜ್ಯುಬಿಲಿಯಂಟ್ ಕಾರ್ಖಾನೆಯ ಇಬ್ಬರಿ ಸೋಂಕು ತಗುಲಿತ್ತು. ಓರ್ವ ಸೋಂಕಿತ ಗುಣವಾಗಿದ್ರೆ, ಕ್ವಾರಂಟೈನ್ನಲ್ಲಿದ್ದವರನ್ನು ಮನೆಗೆ ವಾಪಸ್ ಕರೆಯಿಸಲಾಗಿದೆ.
ಮಂಡ್ಯದಲ್ಲಿ ಕರೊನಾ ದೂರವಾಗುತ್ತಿದ್ದೆ ಎನ್ನುವಷ್ಟರಲ್ಲೇ ಮತ್ತೊಂದು ತಲೆನೋವು ಎದುರಾಗಿದೆ. ಮುಂಬೈನಿಂದ ಬಂದವರಿಂದಾಗಿ ಮಂಡ್ಯದಲ್ಲಿ ಸೋಂಕಿತರು ಹೆಚ್ಚಳವಾಗಿದೆ. ಶವ ತಂದು ಅಂತ್ಯಕ್ರಿಯೆ ನೆರವೇರಿಸಿದ್ದ ನಾಲ್ವರು ಸೇರಿ 7 ಮಂದಿ ಸೋಂಕಿತರಿಗೂ ಮುಂಬೈ ಸಂಪರ್ಕವಿದೆ. ಮತ್ತಷ್ಟು ಸೋಂಕಿತರು ಹೆಚ್ಚಾಗುವ ಆತಂಕ ತಲೆದೂರಿದೆ. ಮಂಡ್ಯ ಜಿಲ್ಲಾಡಳಿತಕ್ಕೆ ಮುಂಬೈನಿಂದ ವಾಪಸ್ಸಾದ ವಲಸಿಗರು ತಲೆನೋವಾಗಿ ಪರಿಣಮಿಸಿದ್ದಾರೆ. (ದಿಗ್ವಿಜಯ ನ್ಯೂಸ್)