ಮೂಲ್ಕಿ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹಿಂದಿಗಿಂತಲೂ ಹೆಚ್ಚು ಸವಾಲು ಹೊಂದಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಹೊಂದಿದರೆ ವಾತ್ರ ಸಾಧಕರಾಗಲು ಸಾಧ್ಯ ಎಂದು ಮೂಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ ಭಟ್ ಹೇಳಿದರು.
ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಪ್ರೌಢ ವಿಭಾಗದ 2024ನೇ ಸಾಲಿನ ವಾರ್ಷಿಕೋತ್ಸವದಲ್ಲಿ ವಾತನಾಡಿದರು.
ಅತಿಥಿ ಶಾಲೆಯ ಹಳೇ ವಿದ್ಯಾರ್ಥಿನಿ ಬೆಂಗಳೂರು ಪಿಡಬ್ಲುೃಸಿ ಕಂಪನಿಯ ಹಿರಿಯ ಅಸೋಸಿಯೇಟ್ ಅಕ್ಷತಾ ಡಿ.ಸಾಲ್ಯಾನ್ ವಾತನಾಡಿ, ಶಿಕ್ಷಕರು ಸರ್ವಾಂಗೀಣ ಅಭಿವೃದ್ಧಿಯುಕ್ತ ಶಿಕ್ಷಣ ವ್ಯವಸ್ಥೆ ರೂಪಿಸಿ ಸಾವಾನ್ಯ ವಿದ್ಯಾರ್ಥಿಗಳನ್ನು ಅಸಾವಾನ್ಯರನ್ನಾಗಿಸುತ್ತಾರೆ. ಇಲ್ಲಿನ ಶಿಕ್ಷಣದಿಂದ ಸಿ.ಎ.ಪದವಿ ಗಳಿಸಲು ಬಹು ಸಹಕಾರಿಯಾಯಿತು ಎಂದರು.
ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ವಾಡಿ ಸನ್ಮಾನಿಸಲಾಯಿತು.
ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಪಾಂಡುರಂಗ ಭಟ್, ಕಾರ್ಯದರ್ಶಿ ಎಚ್.ರಾಮದಾಸ್ ಕಾಮತ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲೆ ಕಾವಾಕ್ಷಿ ಆರ್.ನಾಯಕ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. ನಾಯಕಿ ಎಂ.ವಿನಯ ಎ. ಕುಡ್ವ ಸ್ವಾಗತಿಸಿದರು. ಸಹ ಶಿಕ್ಷಕಿ ಪವಿತ್ರಾ ಅಶೋಕ್ ಹಾಗೂ ಗೀತಾ ನಿರೂಪಿಸಿದರು. ಉಪನಾಯಕ ರಿಶನ್ ಆರ್.ಶೆಟ್ಟಿ ನೆರವೇರಿಸಿದರು.