ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 12ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಮೇಲ್‌ಗಂಗೊಳ್ಳಿಯ ಡಾ.ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.  
ಜಿಲ್ಲೆ

ಗಮನಸೆಳೆದ ಮುದ್ದುಕೃಷ್ಣರು

ಗಂಗೊಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ, ಅಮೃತಾ ಯುವತಿ ಮಂಡಲ, ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ, ಗಂಗೊಳ್ಳಿ ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 12ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಮೇಲ್‌ಗಂಗೊಳ್ಳಿಯ ಡಾ.ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ನಡೆಯಿತು.

ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿರ್ದೇಶಕಿ ಯಾಮಿನಿ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಮಾಜಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ ಶುಭಾಶಂಸನೆಗೈದರು. ನಿವೃತ್ತ ಶಿಕ್ಷಕ ಪ್ರೇಮಾನಂದ ಕೆ. ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಆಶಾ, ಜ್ಯೋತಿ, ಸವಿತಾ ಉಮಾನಾಥ ದೇವಾಡಿಗ ತೀರ್ಪುಗಾರರಾಗಿ ಸಹಕರಿಸಿದರು.

ಯುವಕ ಮಂಡಲ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಕಾರ್ಯದರ್ಶಿ ಸರಸ್ವತಿ ನಿರೂಪಿಸಿದರು. ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ವಂದಿಸಿದರು.

ಸ್ಪರ್ಧಾ ವಿಜೇತರು

ಹಿರಿಯರ ವಿಭಾಗ: ಮೋನಿಷಾ (ಪ್ರಥಮ), ಶಾರ್ವಿ ಸದಾನಂದ ಖಾರ್ವಿ (ದ್ವಿತೀಯ), ಮನೋಜ ಎಂ.ದೇವಾಡಿಗ (ತೃತೀಯ), ಕಿರಿಯರ ವಿಭಾಗ: ಆಯುಷ್ (ಪ್ರಥಮ), ಶಯನ್ (ದ್ವಿತೀಯ), ಪ್ರಗ್ಯಾನ್ (ತೃತೀಯ).