ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಅವರು ನಿನ್ನೆಯಷ್ಟೇ ನೀಡಿದ್ದ ಮತಾಂತರ ಹೇಳಿಕೆಯಿಂದ ಘರ್ ವಾಪ್ಸಿ ಆಗಿದ್ದಾರೆ. ಅಂದರೆ, ಮತಾಂತರ ಆಗಿರುವವರು ವಾಪಸ್ ಹಿಂದೂ ಧರ್ಮಕ್ಕೆ ಮತಾಂತರಿಸಬೇಕು ಎಂದು ನಿನ್ನೆ ತಾವು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಅವರು ಹಿಂದೂ ಪುನರುಜ್ಜೀವನ ಆಗಬೇಕು ಎಂದು ಹೇಳಿದ್ದರು. ಭಾರತದಲ್ಲಿ ಮುಸ್ಲಿಮರಾಗಿ ಮತಾಂತರ ಆಗಿರುವವರನ್ನಷ್ಟೇ ಅಲ್ಲದೆ ಪಾಕಿಸ್ತಾನದಲ್ಲೂ ಮತಾಂತರವಾಗಿ ಮುಸ್ಲಿಮರಾಗಿರುವವರನ್ನೂ ಮರಳಿ ಹಿಂದೂ ಧರ್ಮಕ್ಕೆ ಕರೆತರಬೇಕು ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್; ಇನ್ಸ್ಪೆಕ್ಟರ್-ಎಎಸ್ಐ ವಿರುದ್ಧ ದಾಖಲಾಯಿತು ಎಫ್ಐಆರ್
ಆದರೆ ಎರಡೇ ದಿನಗಳಲ್ಲಿ ಈ ಹೇಳಿಕೆಯನ್ನು ಅವರು ವಾಪಸ್ ಪಡೆದುಕೊಂಡಿದ್ದಾರೆ. 'ನಾನು ಎರಡು ದಿನಗಳ ಹಿಂದೆ ಉಡುಪಿ ಕೃಷ್ಣ ಮಠದಲ್ಲಿ 'ಭಾರತದಲ್ಲಿ ಹಿಂದೂ ಪುನರುಜ್ಜೀವನ' ಎಂಬ ವಿಷಯ ಕುರಿತು ಮಾತನಾಡಿದ್ದು, ಆ ಸಂದರ್ಭದ ಕೆಲವು ಮಾತುಗಳು ವಿವಾದಕ್ಕೀಡಾದ್ದರಿಂದ ನನ್ನ ಹೇಳಿಕೆಗಳನ್ನು ಬೇಷರತ್ತಾಗಿ ವಾಪಸ್ ಪಡೆಯುತ್ತೇನೆ' ಎಂದು ಹೇಳಿದ್ದಾರೆ.