ಬೆಂಗಳೂರು: ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್. ಇವರನ್ನ ನಂಬಿದ ಜನರೀಗ ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಬರೋಬ್ಬರಿ 900 ಜನರಿಗೆ ಪಂಗನಾಮ ಸುಮಾರು 20 ಕೋಟಿ ರೂಪಾಯಿ ವಂಚಿಸಿರುವ ಆರೋಪ ಖತರ್ನಾಕ್ ದಂಪತಿ ಮೇಲಿದೆ. ಈ ಆರೋಪಿಗಳ ಹೆಸರು ಜ್ಞಾನೇಶ್-ಲೀಲಾವತಿ. ಈ ದಂಪತಿ ಸೇರಿದಂತೆ ಮಗ ಮನೋಜ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಹೆಚ್ಚುವರಿ ಬಡ್ಡಿ ಆಸೆಗೆ ಬೀದಿಗೆ ಬಿದ್ದ ಹೂಡಿಕೆದಾರರು, ಪ್ರತಿಭಟನೆ ಮೂಲಕ ಕಣ್ಣೀರಿಡುತ್ತಿದ್ದಾರೆ. ಜ್ಞಾನೇಶ್ ಮತ್ತು ಲೀಲಾವತಿ ಅವರ ಮಗಳು ಮೇಘನಾ ಹಾಗೂ ಅಳಿಯ ರವಿಕುಮಾರ್ ಕೂಡ ವಂಚನೆಯಲ್ಲಿ ಭಾಗವಹಿಸಿದ್ದಾರೆ. ಅವರನ್ನೂ ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆ ರೈಟರ್ ಆಗಿರುವ ಅಳಿಯ ರವಿಕುಮಾರ್, ಈ ವಂಚನೆ ಕೇಸ್ ಮೇಲೆ ಪ್ರಭಾವ ಬೀರುವ ಆತಂಕ ಸಂತ್ರಸ್ತರಲ್ಲಿ ದಟ್ಟವಾಗಿದೆ. ಇದನ್ನೂ ಓದಿರಿ ಪ್ಲೀಸ್… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?
ಜನರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಯಾಮಾರಿಸುತ್ತಿದ್ದ ಜ್ಞಾನೇಶ್ ಮತ್ತು ಲೀಲಾವತಿ ದಂಪತಿ, ಪತ್ನಿಗೆ ಹೇಳದಂತೆ ಪತಿಯಿಂದ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಇವರನ್ನು ನಂಬಿದ ಮಂಜುಳಾ ಎಂಬಾಕೆ ಬರೋಬ್ಬರಿ 20 ಲಕ್ಷ ಹಣ ಕೊಟ್ಟಿದ್ದರು. ಇದೀಗ ಹಣ ವಾಪಸ್ ಬಾರದೆ ಕಂಗಾಲಾಗಿರುವ ಆಕೆ, ಮಗಳ ಮದುವೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಅದೇ ರೀತಿ ನಿವೃತ್ತ ಕೆಎಸ್ಆರ್ಟಿಸಿ ಚಾಲಕ ನಾರಾಯಣ್ಗೂ ಮೋಸ ಮಾಡಲಾಗಿದೆ. ಮನೆ ಖರೀದಿ ಆಸೆಯಲ್ಲಿ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದರು. ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜ್ಞಾನೇಶ್ ಮತ್ತು ಲೀಲಾವತಿ ದಂಪತಿಯ ಅಳಿಯ ರವಿಕುಮಾರ್ ಮತ್ತು ಮಗಳು ಮೇಘನಾರನ್ನು ಬಂಧಿಸಿ. ಅವರಿಬ್ಬರೂ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು. ಕೂಡಲೇ ಈ ಕೇಸ್ ಅನ್ನು ಸಿಐಡಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.