ಜಿಲ್ಲೆ

ಪೊಲೀಸರ ಕೈಗೆ ಸಿಕ್ಕಿಬಿದ್ದ ಮೊಬೈಲ್​ ಕಳ್ಳರು, ಈ ಫೋನ್​ ನಿಮ್ದ ನೋಡಿ...

arunakunigal

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಬ್ಬರು ಕುಖ್ಯಾತ ಮೊಬೈಲ್ ಸ್ನ್ಯಾಚರ್ಸ್​ಗಳನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಒಬ್ಬಂಟಿಯಾಗಿ ನಡೆದುಕೊಂಡು ಹೋಗುವ ಪಾದಚಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳರು, ಕ್ಷಣಾರ್ಧದಲ್ಲಿ ಮೊಬೈಲ್​ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ರಾತ್ರಿ ಮಾತ್ರವಲ್ಲ, ಹಗಲಿನಲ್ಲೂ ಲೆಕ್ಕವಿಲ್ಲದಷ್ಟು ಮಂದಿಯ ಮೊಬೈಲ್​ಗಳು ಕಳ್ಳರ ಪಾಲಾಗಿವೆ.

ಮೊಬೈಲ್​ ಕಳವಿನ ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕಳ್ಳರ ಬೇಟೆಗೆ ಬಲೆ ಬೀಸಿದ ಚಂದ್ರಾಲೇಔಟ್ ಠಾಣೆಯ ಪೊಲೀಸರು ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಬಾರಕ್ ಮತ್ತು ಸಯ್ಯದ್ ಉಮರ್ ಫಾರುಕ್ ಬಂಧಿತರು. ಬ್ಲಾಕ್ ಪಲ್ಸರ್ ಬೈಕ್​ನಲ್ಲಿ ಬಂದು ಕ್ಷಣಾರ್ಧದಲ್ಲೇ ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದರು. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಬಂಧಿತರಿಂದ 1.60 ಲಕ್ಷ ಮೌಲ್ಯದ 2 ಪಲ್ಸರ್ ಬೈಕ್, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಕದ್ದ ಮೊಬೈಲ್​ಗಳನ್ನು ಮುದಾಸಿರ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರಂತೆ. ಆರೋಪಿಗಳ ಮಾಹಿತಿ ಮೇರೆಗೆ ಮುದಾಸಿರ್​ನನ್ನು ಬಂಧಿಸಿದ ಪೊಲೀಸರು ಆತನ ಬಳಿಯಿದ್ದ 22 ಮೊಬೈಲ್ ಫೋನ್, 2.52 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.