ಜಿಲ್ಲೆ

ಬೆಳಗಾವಿಯಲ್ಲಿ ಸೈಕಲ್ ಏರಿ ಅಧಿವೇಶನಕ್ಕೆ ಬಂದ ಶಾಸಕರು!

ಬೆಳಗಾವಿ: ಪರಿಸರ ಸಂರಕ್ಷಣೆ ಕುರಿತು ಜಾಗೃತಿ ‌ಮೂಡಿಸಲು ಮಾಜಿ ಸಚಿವರು, ಹಾಲಿ ಶಾಸಕರು ಗುರುವಾರ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಎಲೆಕ್ಟ್ರಾನಿಕ್ ಸೈಕಲ್ ಏರಿ ಆಗಮಿಸಿದ್ದು ವಿಶೇಷವಾಗಿತ್ತು.

ಮಾಜಿ ಸಚಿವ ವಿ.ಮಹೇಶ, ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ತುಳಿಸಿ ಮುನಿರಾಜು, ಕೇಶವ ಪ್ರಸಾದ್ ಸೇರಿದಂತೆ ಬಿಜೆಪಿ ಶಾಸಕರು, ಮುಖಂಡರು ಎಲೆಕ್ಟ್ರಾನಿಕ್ ಸೈಕಲ್​ ಮೇಲೆ ಸವಾರಿ ಮಾಡುತ್ತಾ ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆ ಕೂಗುತ್ತಾ ಸೌಧಕ್ಕೆ ಆಗಮಿಸಿದರು. ಇದಕ್ಕೆ ಸಚಿವರು ಬೆಂಬಲ ಸೂಚಿಸಿ ‌ಪ್ರೋತ್ಸಾಹಿಸಿದರು.

ಬೆಳಗಾವಿ ನಗರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಾನಿಕ್ ಸೈಕಲ್​ಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ಇಡಲಾಗಿದೆ. ‌ಅವುಗಳನ್ನು ವಿಧಾನಸೌಧವರೆಗೆ ತೆಗೆದುಕೊಂಡು‌ ಬಂದು ಎಲ್ಲರ ಗಮನ ಸೆಳೆದರು.