ಜಿಲ್ಲೆ

ಚೇತನ್ ಶೆಟ್ಟಿ ನಿವಾಸಕ್ಕೆ ಶಾಸಕಿ ಭೇಟಿ : ಮೃತನ ಕುಟುಂಬಕ್ಕೆ ನೆರವು ದೊರಕಿಸುವ ಭರವಸೆ

ಸೌಮ್ಯ ಆರ್

ಕಡಬ: ಗುಂಡ್ಯ ಹೊಳೆಯ ಇಚ್ಲಂಪಾಡಿ ಸೇತುವೆ ಬಳಿ ಇತ್ತೀಚೆಗೆ ನದಿಗೆ ಸ್ನಾನಕ್ಕಿಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಕಡಬದ ಇಚ್ಲಂಪಾಡಿ ಸಮೀಪದ ಕೆಡೆಂಬೇಲು ನಿವಾಸಿ ಚೇತನ್ ಶೆಟ್ಟಿ ಅವರ ನಿವಾಸಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದರು.

ಸರ್ಕಾರದಿಂದ ಮೃತರ ಕುಟುಂಬಕ್ಕೆ ಸಹಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಜಿಪಂ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಕೊಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಇಚ್ಲಂಪಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ದಿವ್ಯೇಶ್ ಕಲ್ಯ ಮತ್ತಿತರರಿದ್ದರು.