ಜಿಲ್ಲೆ

ನಾಪತ್ತೆಯಾದ ವಿವಾಹಿತ ಮಹಿಳೆ

ಸೌಮ್ಯ ಆರ್

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜೇಶ್ವರ ಕೆ.ಜಿಎಂ ರಸ್ತೆ ಸುನೈನ್ ಕೋಟೇಜ್ ನಿವಾಸಿ ರಮ್ಲಾ ಎಂಬುವವರ ಪುತ್ರಿ, ರೈಶಾನಾ(20)ನಾಪತ್ತೆಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ತಳಿಪರಂಬದ ಪತಿ ಮನೆಯಿಂದ ರೈಶಾನಾ ನಾಪತ್ತೆಯಾಗಿದ್ದಾಳೆ. ಇದೇ ಸಂದರ್ಭ ಕುಂಬಳೆ ನಿವಾಸಿ ಮುಸ್ತಫಾ ಎಂಬಾತ ನಾಪತ್ತೆಯಾಗಿದ್ದು, ಈತನ ಜತೆ ರೈಶಾನಾ ತೆರಳಿರುವ ಸಾಧ್ಯತೆಯಿರುವುದಾಗಿಯೂ ಬಗ್ಗೆ ತಾಯಿ ರಮ್ಲಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.