ಜಿಲ್ಲೆ

ಪತ್ನಿ ಸಾವಿಗೀಡಾದ ಬಳಿಕ ನಿತ್ಯ ಕಿರುಕುಳ: ಅಪ್ರಾಪ್ತ ಬಾಲಕಿಯಿಂದಲೇ ತಂದೆಯ ಸಾವು

ಬೆಂಗಳೂರು: ಆಚಾತುರ್ಯದಿಂದಾಗಿ ಅಪ್ರಾಪ್ತ ಬಾಲಕಿಯೇ ತಂದೆಯ ಸಾವಿಗೆ ಕಾರಣವಾಗಿರುವ ಘಟನೆ ಮೈಕೋ ಲೇಔಟ್ ಮಾರುತಿ ಪ್ಯಾರಡೈಸ್ ಅಪಾರ್ಟ್ಮೆಂಟ್​ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಸಪ್ತಿಕ್ ಬ್ಯಾನರ್ಜಿ (45 ) ಮೃತ ದುರ್ದೈವಿ. ಮೂರ್ನಾಲ್ಕು ವರ್ಷದ ಹಿಂದೆ ಸಪ್ತಿಕ್​ ಪತ್ನಿ ಮೃತಪಟ್ಟಿದ್ದರು. ಇದರ ನೋವಿನಲ್ಲಿದ್ದ ಸಪ್ತಿಕ್ ಖಿನ್ನತೆಗೊಳಗಾಗಿದ್ದ. ಪ್ರತಿ ನಿತ್ಯ ಮನೆಯಲ್ಲೇ ಕುಡಿದು 15 ವರ್ಷದ ಮಗಳು ಹಾಗೂ 12 ವರ್ಷದ ಮಗನ ಜತೆ ಗಲಾಟೆ ಮಾಡ್ತಿದ್ದ.

ಪಿಯಾನೋ ಕೀ ಬೋರ್ಡ್ ವಾದಕನಾಗಿದ್ದ ಸಪ್ತಿಕ್, ನಿನ್ನೆ ಮಧ್ಯರಾತ್ರಿ ಆದ್ರೂ ಕುಡಿದು ಜೋರಾಗಿ ಪಿಯಾನೋ ನುಡಿಸುತ್ತಿದ್ದ. ಆದರೆ, ಮಗಳು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಮಗಳೊಂದಿಗೆ ಕ್ಯಾತೆ ತೆಗೆದು ಗಲಾಟೆ ಶುರುವಿಟ್ಟುಕೊಂಡಿದ್ದ. ಚಾಕು ತೆಗೆದು ಮಗಳಿಗೆ ತಿವಿಯಲು ಯತ್ನಿಸಿದ್ದ. ಆದರೆ, ತಪ್ಪಿಸಿಕೊಳ್ಳಲು ತಂದೆಯನ್ನು ಮಗಳು ತಳ್ಳಿದಾಗ ಕಾಲು ಜಾರಿ ಬಿದ್ದ ಸಪ್ತಿಕ್​ ಎದೆಗೆ ಚಾಕು ಇರಿದು ಸ್ಥಳದಲ್ಲೇ ಮೃತಪಟ್ಟಿದ್ದ.

ಘಟನೆಗೆ ಸಂಬಂಧಿಸಿದಂತೆ ಮೈಕೋ ‌ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)