ಜಿಲ್ಲೆ

ವಿಶ್ವಕಪ್​ ಪಂದ್ಯದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಟಿಕೆಟ್​ ವ್ಯವಸ್ಥೆ; ಇಲ್ಲಿದೆ ಪೂರ್ಣ ವಿವರ…

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ.20, 26 ಹಾಗೂ ನ.4, 9, 12ರಂದು ನಡೆಯಲಿರುವ ಏಕದಿನ ವಿಶ್ವಕಪ್​ ಪಂದ್ಯಾವಳಿಯಂದು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ರಿರ್ಟನ್​ ಜರ್ನಿ ಪೇಪರ್​ ಟಿಕೆಟ್​ ಲಭ್ಯವಿರುತ್ತದೆ.

ಇದರಿಂದ ಕಬ್ಬನ್​ ಪಾರ್ಕ್​ ಮತ್ತು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ಟಿಕೆಟ್​ ಕೌಂಟರ್​ಗಳಲ್ಲಿ ಜನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ರಿರ್ಟನ್​ ಜರ್ನಿ ಪೇಪರ್​ ಟಿಕೆಟ್​ನ ಬೆಲೆ 50 ರೂ. ಇರಲಿದ್ದು, ಕಬ್ಬನ್​ ಪಾರ್ಕ್​ ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆ ನಂತರ ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ.

ವಾಟ್ಸ್​ಅಪ್​, ನಮ್ಮ ಮೆಟ್ರೋ ಆ್ಯಪ್​ ಅಥವಾ ಪೆಟಿಎಂ ಮೂಲಕ ಕ್ರಿಕೆಟ್​ ಪಂದ್ಯಾವಳಿಗಳು ಪ್ರಾರಂಭವಾಗುವ ಮೊದಲು ಮುಂಗಡವಾಗಿ ಕ್ಯೂ ಆರ್​ ಕೋಡ್​ ಟಿಕೆಟ್​ಗಳನ್ನು ಖರೀದಿಸಿದರೆ ಸಾಮಾನ್ಯ ದರದ ಶೇ.5 ರಿಯಾಯಿತಿ ಸಿಗಲಿದೆ.