ಜಿಲ್ಲೆ

ಪರಮಶಕ್ತಿಗಳ ಆರಾಧನಾ ತಾಣ ದೇವಳ : ಅಭಿನಂದನಾ ಸಮಾರಂಭದಲ್ಲಿ ಜಯಾನಂದ ಎಂ.ಹೇಳಿಕೆ

ಸೌಮ್ಯ ಆರ್

ಬಂಟ್ವಾಳ: ದೇವಸ್ಥಾನಗಳು ಪರಮಶಕ್ತಿಗಳ ಆರಾಧನಾ ತಾಣ ಮಾತ್ರವಲ್ಲ, ಜನ ಅರಿತು ಬೆರೆತು ಬಾಳುವ ಸದಾಶಯವನ್ನೂ ಹೊಂದಿವೆ. ಪ್ರಾಮಾಣಿಕತೆ ಮತ್ತು ಪ್ರೀತಿ ಈ ಎರಡು ಗುಣಗಳಿಗೆ ವ್ಯಕ್ತಿಗೆ ಶಕ್ತಿಯನ್ನು ತುಂಬುವ ಶಕ್ತಿ ಇದೆ. ಹಣ ಗಳಿಕೆಯೊಂದೆ ಬದುಕಿನ ಪರಮ ಧ್ಯೇಯವಲ್ಲ ಎಂದು ಶ್ರೀಗುರು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ, ಮೆಸ್ಕಾಂ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತ ಜಯಾನಂದ ಎಂ.ಹೇಳಿದರು.

ಕೊರಂಟಬೆಟ್ಟು ಕ್ಷೇತ್ರದಲ್ಲಿ ಶ್ರಾವಣ ಪರ್ವ-ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತಾಡಿದರು. ಜಗದೀಶ್ಚಂದ್ರ ಡಿ.ಕೆ.ಮಾತನಾಡಿದರು. ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಸ್ರಣ್ಣ ಗಂಗಾಧರ ಕಕ್ರಾಣ್ಣಾಯ, ಉದ್ಯಮಿ ಅನಿಲ್ ದತ್ತರಾಮ್ ಗಾಯಕ್ವಾಡ, ಜಿನ್ನಪ್ಪ ಪೂಜಾರಿ, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.

ಕ್ಷೇತ್ರದ ದೈವದ ಪರಿಚಾರಕರಾದ ವಾಸು ಪೂಜಾರಿ, ನೋಣಯ ಪೂಜಾರಿ ಸಹೋದರರು, ಶೀನ ಪರವ, ನಾರಾಯಣ ಪರವ, ಕರಿಯ ನಲಿಕೆ, ಜಿನ್ನಪ್ಪ ಪೂಜಾರಿ, ಕಮಲಾ, ರಾಮಣ್ಣ ಪೂಜಾರಿ, ಬೂಬ ಪೂಜಾರಿ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ವಿವೇಕಾನಂದ ಪೂಜಾರಿ ಕೌಡೋಡಿ ಸ್ವಾಗತಿಸಿ, ಡಾ.ಯೋಗೀಶ ಕೈರೋಡಿ ಪ್ರಸ್ತಾವನೆಗೈದರು, ದೀಪಕ್ ಕೋಟ್ಯಾನ್ ವಂದಿಸಿದರು, ವೀಕ್ಷಿತಾ ನಿತೇಶ್ ನಿರೂಪಿಸಿದರು.