ಜಿಲ್ಲೆ

ಮಾದಕ ವ್ಯಸನದಿಂದ ಕೌಟುಂಬಿಕ ಸಮಸ್ಯೆ : ಮಹಿಳಾ ಆಯೋಗ ಸದಸ್ಯೆ ಪಿ.ಕುಞೌಯಿಷಾ ಕಳವಳ

ಸೌಮ್ಯ ಆರ್

ಕಾಸರಗೋಡು: ಮಾದಕ ವ್ಯಸನದಿಂದ ಕುಟುಂಬ ಸಂಬಂಧಗಳನ್ನು ಕೆಡಿಸುವುದರ ಜತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ ಎಂದು ರಾಜ್ಯ ಮಹಿಳಾ ಸಮಿತಿ ಸದಸ್ಯೆ, ವಕೀಲೆ ಪಿ.ಕುಞೌಯಿಷಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಆಯೋಗದ ಮೆಗಾ ಅದಾಲತ್‌ನಲ್ಲಿ ಮಾತನಾಡಿದರು.

ಸಭೆಯಲ್ಲಿ 24 ದೂರುಗಳನ್ನು ಪರಿಗಣಿಸಲಾಗಿದೆ. ಮೂರು ದೂರುಗಳನ್ನು ಪರಿಹರಿಸಲಾಗಿದೆ. ಒಂದು ದೂರನ್ನು ಜಾಗೃತ ಸಮಿತಿಗೆ ರವಾನಿಸಲಾಗಿದೆ. ಒಂದು ದೂರಿನಲ್ಲಿ ಪೊಲೀಸರಿಂದ ಮತ್ತು ಒಂದು ದೂರಿನಲ್ಲಿ ಅಬಕಾರಿ ಇಲಾಖೆಯಿಂದ ವರದಿ ಕೇಳಲಾಗಿದೆ. 18 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಎಎಸ್‌ಐ ಎಂ.ಅನಿತಾ, ವಕೀಲೆ ಎಂ.ಇಂದಿರಾ, ಕುಟುಂಬ ಸಲಹೆಗಾರ್ತಿ ರಮ್ಯಾ ಶ್ರೀನಿವಾಸನ್ ಮೊದಲಾದವರುು ಭಾಗವಹಿಸಿದ್ದರು.