ಅಟ್ಟಪ್ಪರಂಬ ಪ್ರಾದೇಶಿಕ ಸಮಿತಿ ರಚನೆ

13
Published on

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಅಂಗವಾಗಿ ಅಟ್ಟಪ್ಪರಂಬ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಮುಳಿಯಾರು ವ್ಯಾಪ್ತಿಯ ಅಟ್ಟಪ್ಪರಂಬ ಪ್ರಾದೇಶಿಕ ಸಮಿತಿ ರಚನಾ ಸಭೆ ಜರುಗಿತು. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಕಾರ್ಯಕಾರಿ ಸಮಿತಿ ರಚಿಸಲಾಯಿತು. ರಕ್ಷಾಧಿಕಾರಿಗಳಾಗಿ ಕೃಷ್ಣ ಭಟ್ ಅಡ್ಕ, ರಾಜೇಶ್ ಭಟ್, ಸುಕುಮಾರನ್ ಪಾಟಿಕ್ಕೊಚ್ಚಿ, ಪ್ರಕಾಶನ್ ಪಾತನಡುಕ್ಕ, ಬಾಲಕೃಷ್ಣನ್ ವಿಷ್ಣುಮಂಗಲಂ, ಸುರೇಶ ರಾಯ್ ಅಮಕ್ಕಾರ್, ಉದಯ ನಾಯಕ್ ಚರೋಳಿಮೂಲೆ, ಅಧ್ಯಕ್ಷ-ರಾಘವನ್, ಉಪಾಧ್ಯಕ್ಷ-ಸುಕುಮಾರನ್ ಅಟ್ಟಪ್ಪರಂಬ, ಸಂಜೀವನ್, ಕಾರ್ಯದರ್ಶಿ-ಅನಿಲ್ ಕುಮಾರ್ ಮಜಕ್ಕಾರ್, ಜತೆಕಾರ್ಯದರ್ಶಿ-ಸುನೀಲ್ ಕುಮಾರ್ ಅಟ್ಟಪ್ಪರಂಬ, ಮಣಿಕಂಠನ್, ನಳಿನಿ, ಕೋಶಾಧಿಕಾರಿ-ಸುಶಾಂತ್ ಪಾಟಿಕ್ಕೊಚ್ಚಿ, ಮಾತೃ ಸಮಿತಿ ಅಧ್ಯಕ್ಷೆಯಾಗಿ ಅಂಬಿಕಾ ಪ್ರಸನ್ನನ್ ಪಾತನಡುಕ್ಕ ಮತ್ತು ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಸಂಯೋಜಕರಾಗಿ ಉಲ್ಲಾಸ್ ವೆಳ್ಳಾಲ ಅವರನ್ನು ಆಯ್ಕೆ ಮಾಡಲಾಯಿತು. ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಗೆ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net