ಹೆಬ್ರಿ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಎಸ್.ಎ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಯಿತು 
ಜಿಲ್ಲೆ

ಆರ್‌ಟಿಒ ಅಧಿಕಾರಿಗಳೊಂದಿಗೆ ಸಭೆ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿಯಲ್ಲಿ ಸರ್ಕಾರಿ ಬಸ್ ಓಡಿಸುವ ಬಗ್ಗೆ ಆರ್‌ಟಿಒ ಹಾಗೂ ಸಾರ್ವಜನಿಕರೊಂದಿಗೆ ಹೆಬ್ರಿಯ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.

ಸಾರ್ವಜನಿಕರು ಬಸ್ ಓಡಿಸುವ ಬಗ್ಗೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತಶ್ರೀಕಾಂತ್ ಪೂಜಾರಿಗೆ ಬಸ್ ರೂಟ್ ಮ್ಯಾಪ್ ಸಿದ್ಧಪಡಿಸಿ ನೀಡಲು ಹೇಳಿದ್ದೇನೆ. ಶೀಘ್ರದಲ್ಲಿ ಎರಡು ಬಸ್‌ಗಳನ್ನು ನೀಡುವ ಬಗ್ಗೆ ಕ್ರಮ ಜರುಗಿಸಲಾಗುವುದೆಂದು ಆರ್‌ಟಿಒ ಇನ್‌ಸ್ಪೆಕ್ಟರ್ ಮಾರುತಿ ನಾಯ್ಕ್ ಹೇಳಿದರು.

ಹೆಬ್ರಿ-ಬ್ರಹ್ಮವಾರ ಸಂಪರ್ಕಿಸುವ ಬಸ್‌ಗಳ ಸೇವೆ ನಿಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ವಿಜಯೇಂದ್ರ ಶೆಟ್ಟಿ ಮನವಿ ಮಾಡಿದರು. ಶ್ರೀಕಾಂತ ಪೂಜಾರಿ, ವಿಜೇಂದ್ರ ಶೆಟ್ಟಿ ಇದ್ದರು.