ಜಿಲ್ಲೆ

ಹಾಸ್ಟೆಲ್​ನಲ್ಲಿ ಎಂಬಿಬಿಎಸ್​ ವಿದ್ಯಾರ್ಥಿ ಆತ್ಮಹತ್ಯೆ

arunakunigal

ಬೀದರ್: ಕಾಲೇಜಿನ ಹಾಸ್ಟೆಲ್​ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಮೃತಪಟ್ಟ ಘಟನೆ ನಗರದಲ್ಲಿ ಸಂಭವಿಸಿದೆ.

ಬಸವಕಲ್ಯಾಣ ಮೂಲದ ವಿನೀತ್ ವಿಜಯಕುಮಾರ ‌ಕಾಂಬಳೆ( 24) ಮೃತ ದುರ್ದೈವಿ. ಈತ ಬೀದರ್​ನ ಬ್ರಿಮ್ಸ್​ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್​ ಓದುತ್ತಿದ್ದ. ಬ್ರಿಮ್ಸ್ ಹಾಸ್ಟೆಲ್​ನಲ್ಲೇ ಇದ್ದ.

ಇಂದು ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ವಿನೀತ್​ ವಿಜಯಕುಮಾರ ಕಾಂಬಳೆಯ ಶವ ಪತ್ತೆಯಾಗಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ನ್ಯೂ ಟೌನ್ ಠಾಣೆ ಪಿಎಸ್​ಐ ಸಂತೋಷ ತಟ್ಟೆಪಲ್ಲಿ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.