ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಿತ ಕಾರ್ಯಗಾರ ನಡೆಯಿತು.  
ಜಿಲ್ಲೆ

ಮಕ್ಕಳ ಕೂಟದಲ್ಲಿ ಗಣಿತ ಕಾರ್ಯಾಗಾರ

ಇಂದಿರಾ ಎನ್ ಕೆ

ಕುಂದಾಪುರ: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಗಣಿತ ಕಾರ್ಯಗಾರ ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆಯಿತು.

ಶಾಲಾ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀಧರ್ ಭಟ್, ವಂಡ್ಸೆ ಕೆಪಿಎಸ್‌ಸಿ ಶಾಲೆ ಮುಖ್ಯಶಿಕ್ಷಕ ಶ್ರೀಧರ್ ಭಟ್, ಹೆಮ್ಮಾಡಿ ಜನತಾ ಪ್ರೌಢಶಾಲೆ ಶಿಕ್ಷಕ ಶ್ರೀಧರ್ ಗಾಣಿಗ ತರಬೇತಿ ನೀಡಿದರು.
ಮುಖ್ಯಶಿಕ್ಷಕಿ ದೀಪಿಕಾ ಸುಭಾಷ್ ಸ್ವಾಗತಿಸಿದರು. ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಚಂದ್ರ ಕೆ. ದೇವಾಡಿಗ ಪ್ರಸ್ತಾವನೆಗೈದರು. ಮಂಜುನಾಥ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ವಲಯದ ಎಲ್ಲ ಗಣಿತ ಶಿಕ್ಷಕರಿಗೆ ತರಬೇತಿ ಆಯೋಜಿಸಲಾಗಿತ್ತು.