ಜಿಲ್ಲೆ

ಮರಾಟಿ ಸಂಘ ಪದಾಧಿಕಾರಿಗಳ ಪದಗ್ರಹಣ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಕರ್ಜೆ ನೂಜಿ ಶ್ರೀ ದುರ್ಗಾಪರಮೇಶ್ವರಿ ಜೋಡು ಗದ್ದುಗೆ ಅಮ್ಮನವರ ದೇವಸ್ಥಾನದಲ್ಲಿ ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಉದ್ಘಾಟನಾ ಸಮಾರಂಭ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.

ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಉಮೇಶ್ ಎ.ನಾಯ್ಕ ಚೇರ್ಕಾಡಿ ನೂತನ ಸಂಘ ಉದ್ಘಾಟಿಸಿದರು. ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಮಹೇಂದ್ರ ನಾಯ್ಕ ಚಾಂತಾರು ಅಧ್ಯಕ್ಷತೆ ವಹಿಸಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಹಾರೈಸಿದರು. ಶಾಸಕ ಯಶ್‌ಪಾಲ್ ಎ.ಸುವರ್ಣ ಕೂಡುಕಟ್ಟು ಗುರಿಕಾರರಿಗೆ ಗೌರವ ಸಮರ್ಪಣೆ ಮಾಡಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿಶೇಷ ಚೇತನರಿಗೆ ದಾನಿಗಳ ಮೂಲಕ ನೆರವು ಹಸ್ತಾಂತರಿಸಿದರು.

ಉಡುಪಿ ಲ್ಯಾಂಪ್ಸ್ ಅಧ್ಯಕ್ಷ ಅಮ್ಮುಂಜೆ ನರಸಿಂಹ ನಾಯ್ಕ, ಉದ್ಯಮಿ ಪ್ರತೀಶ್ ನಾಯ್ಕ, ಡಾ.ಉದಯ ನಾಯ್ಕ, ಡಾ.ಪ್ರಕಾಶ್ ನಾಯ್ಕ, ರಾಜೇಶ್ ನಾಯ್ಕ, ಸರಸ್ವತಿ ವಿ.ನಾಯ್ಕ, ಉಪಾಧ್ಯಕ್ಷರಾದ ಕೆ.ಕೃಷ್ಣ ನಾಯ್ಕ, ವೀಣಾ ವಿ.ನಾಯ್ಕ, ಸಲಹಾ ಸಮಿತಿ ಸದಸ್ಯರಾದ ಬಿ.ಟಿ.ನಾಯ್ಕ, ಗೋಪಿ ಕೆ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಹಿರಿಯರಾದ ಅಣ್ಣಯ್ಯ ನಾಯ್ಕ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಂಘ ಉಪಾಧ್ಯಕ್ಷ ಕೆ.ಕೃಷ್ಣ ನಾಯ್ಕ ಕೋಟಂಬೈಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ನಾಯ್ಕ ನಿರೂಪಿಸಿದರು. ಕೋಶಾಧಿಕಾರಿ ರವೀಂದ್ರ ನಾಯ್ಕ ಚಾಂತಾರು ವಂದಿಸಿದರು. ನಂತರ ಸಾಮೂಹಿಕ ಕುಣಿತ ಭಜನೆ ಕಾರ್ಯಕ್ರಮ ಜರುಗಿತು. ರಘು ನಾಯ್ಕ ತಡಾಲು, ಚಂದ್ರಶೇಖರ್ ನಾಯ್ಕ ಕೀರ್ತಿನಗರ ಆರೂರು, ಸುಜಾತಾ ಮಹೇಂದ್ರ ನಾಯ್ಕ ಚಾಂತಾರು, ಜಯಲಕ್ಷ್ಮೀ ಕರ್ಜೆ ಭಜನಾ ಕಾರ್ಯಕ್ರಮ ಸಂಘಟಿಸಿದರು.