ಜಿಲ್ಲೆ

ಆಯ್ತು ಬನ್ನಿ ಅಂದ್ರಂತೆ ಮನುರಂಜನ್ ರವಿಚಂದ್ರನ್​, ಅಭಿಮಾನಿಗಳಿಗೆ ಖುಷಿಯೋ ಖುಷಿ...

ಬೆಂಗಳೂರು: ಕಳೆದ ಒಂದೆರಡು ವರ್ಷಗಳಿಂದ ಕರೊನಾ ಬಹುತೇಕ ಎಲ್ಲವನ್ನೂ ತಡೆದಿದೆ. ಅದೆಷ್ಟೋ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಅದರಲ್ಲಿ ಸಿನಿಮಾ ಸ್ಟಾರ್​ಗಳ ಜನ್ಮದಿನಾಚರಣೆ ಕೂಡ ಸೇರಿದೆ. ಕಳೆದ ಎರಡು ವರ್ಷಗಳಿಂದ ಬಹುತೇಕ ಎಲ್ಲ ಸಿನಿಮಾ ಸ್ಟಾರ್​ಗಳು ಎಂದಿನಂತೆ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿಲ್ಲ.

ಸಿನಿಮಾ ಸ್ಟಾರ್​​ಗಳ ಪಾಲಿಗೆ ಜನ್ಮದಿನವೆಂದರೆ ಕಲಾವಿದ ಹಾಗೂ ಅಭಿಮಾನಿಗಳ ಸಮಾಗಮದ ದಿನದಂತೆ. ಅಂದು ರಾಜ್ಯದ ಮೂಲೆಮೂಲೆಗಳಿಂದ ಅದೆಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಜಮಾಯಿಸುತ್ತಾರೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಹೀಗೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳದ ಸ್ಟಾರ್​ನಟರು ಮನೆ ಬಳಿಗೆ ಬರದಂತೆ ಅಭಿಮಾನಿಗಳಿಗೂ ಕಳೆದೆರಡು ವರ್ಷಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಆದರೆ ಇದೀಗ ರವಿಚಂದ್ರನ್​ ಪುತ್ರ ಮನುರಂಜನ್ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜತೆ ಮನೆ ಬಳಿಯೇ ಆಚರಿಸಿಕೊಳ್ಳಲು ಒಪ್ಪಿದ್ದಾರಂತೆ. 'ಅಭಿಮಾನಿಗಳ ಪ್ರೀತಿಗೆ ಮಣಿದ ಯಂಗ್ ಕ್ರೇಜಿ ಸ್ಟಾರ್ ಅಭಿಮಾನಿಗಳ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಪ್ಪಿದ್ದಾರೆ. ಡಿ. 11ರಂದು ರಾಜಾಜಿನಗರ ರವಿಕಲಾ ನಿವಾಸದಲ್ಲಿ ಈ ಜನ್ಮದಿನಾಚರಣೆ ನಡೆಯಲಿದೆ. ಎಲ್ಲ ಅಭಿಮಾನಿಗಳು ಬರಬಹುದು' ಎಂದು ರವಿಚಂದ್ರನ್ ಮತ್ತು ಮನುರಂಜನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.