ಜಿಲ್ಲೆ

VIDEO| ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾದ ಕಾಡೆಮ್ಮೆ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಡೆಮ್ಮೆ ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ನಗರದ ಅಳಕೆ ವಿಶಾಲ್ ನರ್ಸಿಂಗ್ ಹೋಂ ಬಳಿ ಮಂಗಳವಾರ ಮುಂಜಾನೆ ಕಾಡೆಮ್ಮೆ ಪತ್ತೆಯಾಯಿತು. ದಟ್ಟ ಅಡವಿ ಹುಲ್ಲುಗಾವಲಿನಲ್ಲಿ ಇರಬೇಕಾದ ಕಾಡೆಮ್ಮೆ ನಗರಕ್ಕೆ ಹೇಗೆ ಬಂತು ಎನ್ನುವುದೇ ಇದೀಗ ಅಚ್ಚರಿಯಾಗಿದೆ.

ಸದ್ಯ ಹ್ಯಾಟ್ ಹಿಲ್ ಕಡೆಗೆ ಕಾಡೆಮ್ಮೆ ಸಂಚರಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಇಲಾಖೆಯಿಂದ ಶೋಧ ಕಾರ್ಯ ನಡೆಯುತ್ತಿದೆ.