More

    ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕ್​ ವಾಯುಸೇನೆಯ ಪೈಲಟ್​ ಆಗಿ ಹಿಂದು ಯುವಕ ನೇಮಕ!

    ಇಸ್ಲಮಾಬಾದ್​: ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಾಯುಸೇನೆಯ ಪೈಲಟ್​ ಆಗಿ ಹಿಂದು ಯುವಕನೊಬ್ಬನನ್ನು ಆಯ್ಕೆ ಮಾಡುವ ಮೂಲಕ ಪಾಕಿಸ್ತಾನ ಅಚ್ಚರಿ ಮೂಡಿಸಿದೆ.

    ಯುವಕನ ಹೆಸರು ರಾಹುಲ್​ ದೇವ್​. ಪಾಕಿಸ್ತಾನ ವಾಯುಸೇನೆ (ಪಿಎಎಫ್​)ಯ ಜನರಲ್​ ಡ್ಯೂಟಿ ಪೈಲಟ್​ ಅಧಿಕಾರಿಯಾಗಿ ರಾಹುಲ್​ ದೇವ್​ ನೇಮಕವಾಗಿದ್ದಾರೆ.

    ಇದನ್ನೂ ಓದಿ: ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ಪಾಕಿಸ್ತಾನ ಮಾಧ್ಯಮಗಳ ಪ್ರಕಾರ ರಾಹುಲ್​ ದೇವ್​, ಸಿಂಧ್​ ಪ್ರಾಂತ್ಯದ ಅತಿದೊಡ್ಡ ಜಿಲ್ಲೆ ಥಾರ್ಪಾರ್ಕರ್ ಮೂಲದವರು. ವಿಶೇಷವೆಂದರೆ ಥಾರ್ಪಾರ್ಕರ್ ಜಿಲ್ಲೆಯಲ್ಲಿ ಹಿಂದು ಸಮುದಾಯ ಅತಿದೊಡ್ಡ ಸಂಖ್ಯೆಯಲ್ಲಿದೆ.

    ಇನ್ನು ದೇವ್​ ವಾಯುಸೇನೆ ಪೈಲಟ್​ ಆಗಿ ನೇಮಕವಾಗಿರುವುದಕ್ಕೆ ಅಖಿಲ ಪಾಕಿಸ್ತಾನ ಹಿಂದು ಪಂಚಾಯತ್​ ಕಾರ್ಯದರ್ಶಿ ರವಿ ದವಾನಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು ನಾಗರಿಕ ಸೇವೆಯ ಜತೆಗೆ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಖುಷಿಪಟ್ಟರು.

    ಇದನ್ನೂ ಓದಿ: ಒಂದು ಆತಂಕ ಕಡಿಮೆಯಾಗುತ್ತಿದ್ದಂತೆ ಮಂಡ್ಯಕ್ಕೆ ಮತ್ತೊಂದು ಕಂಟಕ ಎದುರಾಗಿದೆ

    ಪಾಕ್​ನಲ್ಲಿ ಅನೇಕ ವೈದ್ಯರು ಸಹ ಹಿಂದು ಸಮುದಾಯದವರಾಗಿದ್ದಾರೆ. ಸರ್ಕಾರ ಹೀಗೆ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಗಮನಹರಿಸಿದರೆ, ರಾಹುಲ್​ ದೇವ್​ರಂತ ಅನೇಕರು ದೇಶಕ್ಕೆ ಸೇವೆ ಸಲ್ಲಿಸುವ ದಿನ ದೂರವಿಲ್ಲ ಎಂದು ದವಾನಿ ತಿಳಿಸಿದರು. (ಏಜೆನ್ಸೀಸ್)

    ಪಾಕ್ ಸುಪ್ರೀಂ ಆದೇಶಕ್ಕೆ ಭಾರತ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts