More

    ಒಂದು ಆತಂಕ ಕಡಿಮೆಯಾಗುತ್ತಿದ್ದಂತೆ ಮಂಡ್ಯಕ್ಕೆ ಮತ್ತೊಂದು ಕಂಟಕ ಎದುರಾಗಿದೆ

    ಮಂಡ್ಯ: ರೆಡ್​ ಝೋನ್​ನಿಂದ ಚೇತರಿಸಿಕೊಳ್ಳುತ್ತಿದ್ದ ಮಂಡ್ಯಕ್ಕೆ ಮುಂಬೈ ಕರೊನಾ ಸಂಪರ್ಕ ಕಂಟಕವಾಗಿ ಪರಿಣಮಿಸಿದೆ. ಈ ಹಿಂದೆ ತಬ್ಲಿಘಿ ಜಮಾತ್​ ಮಂಡ್ಯ ಜಿಲ್ಲೆಯನ್ನು ಕಾಡಿತ್ತು. ಅದು ದೂರವಾಗುತ್ತಿದ್ದಂತೆ ಮತ್ತೊಂದು ಕಂಟಕ ಎದುರಾಗಿದೆ.

    ಇದನ್ನೂ ಓದಿ: ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ತಬ್ಲಿಘಿಗಳು ಮಂಡ್ಯಕ್ಕೆ ಮೊದಲು ಕರೊನಾ ಸೋಂಕು ತಂದಿದ್ದರು. ತಬ್ಲಿಘಿ ನಂಟಿನಿಂದ ಮಳವಳ್ಳಿಯ 20 ಮಂದಿಗೆ ಸೋಂಕು ತಗುಲಿತ್ತು. ಇದರಿಂದ ಮಂಡ್ಯ ಜಿಲ್ಲೆ ಆತಂಕಗೊಂಡಿತ್ತು. ಇದೀಗ ತಬ್ಲಿಘಿಗಳ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಟ್ಟಿ ನಂಜನಗೂಡಿನ ನಂಜು ಸಹ ಬಹುತೇಕ ನಿವಾರಣೆಯಾಗಿದೆ. ಜ್ಯುಬಿಲಿಯಂಟ್ ಕಾರ್ಖಾನೆಯ ಇಬ್ಬರಿ ಸೋಂಕು ತಗುಲಿತ್ತು. ಓರ್ವ ಸೋಂಕಿತ ಗುಣವಾಗಿದ್ರೆ, ಕ್ವಾರಂಟೈನ್​ನಲ್ಲಿದ್ದವರನ್ನು ಮನೆಗೆ ವಾಪಸ್ ಕರೆಯಿಸಲಾಗಿದೆ.

    ಮಂಡ್ಯದಲ್ಲಿ ಕರೊನಾ ದೂರವಾಗುತ್ತಿದ್ದೆ ಎನ್ನುವಷ್ಟರಲ್ಲೇ ಮತ್ತೊಂದು ತಲೆನೋವು ಎದುರಾಗಿದೆ. ಮುಂಬೈನಿಂದ ಬಂದವರಿಂದಾಗಿ ಮಂಡ್ಯದಲ್ಲಿ ಸೋಂಕಿತರು ಹೆಚ್ಚಳವಾಗಿದೆ. ಶವ ತಂದು ಅಂತ್ಯಕ್ರಿಯೆ ನೆರವೇರಿಸಿದ್ದ ನಾಲ್ವರು ಸೇರಿ 7 ಮಂದಿ ಸೋಂಕಿತರಿಗೂ ಮುಂಬೈ ಸಂಪರ್ಕವಿದೆ. ಮತ್ತಷ್ಟು ಸೋಂಕಿತರು ಹೆಚ್ಚಾಗುವ ಆತಂಕ ತಲೆದೂರಿದೆ. ಮಂಡ್ಯ ಜಿಲ್ಲಾಡಳಿತಕ್ಕೆ ಮುಂಬೈನಿಂದ ವಾಪಸ್ಸಾದ ವಲಸಿಗರು ತಲೆನೋವಾಗಿ ಪರಿಣಮಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಎಣ್ಣೆ ಪಾರ್ಟಿಯಲ್ಲಿ ಲವ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ

    ಮದ್ಯದ ಅಮಲಿನಿಂದ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ದುರಂತ ಸಾವಿಗೀಡಾದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts