ಜಿಲ್ಲೆ

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್​ ಸಾಹಸಕ್ಕೆ ಭಾರಿ ಮೆಚ್ಚುಗೆ!

ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಅವರ ಸಾಹಸಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಂತ ಯಾವುದೋ ದೊಡ್ಡ ಪ್ರಕರಣವೊಂದನ್ನು ಭೇದಿಸಲಾಗಿದೆ ಅಥವಾ ಯಾರೋ ಭಾರಿ ಕ್ರಿಮಿನಲ್​ನನ್ನು ಬಂಧಿಸಲಾಗಿದೆ ಅಂತಲ್ಲ. ಈಗ ಮೆಚ್ಚುಗೆಗೆ ಒಳಗಾಗಿರುವ ಅವರ ಸಾಹಸವೇ ಬೇರೆ.

ಹೊಸ ವರ್ಷದ ಎರಡನೆಯ ದಿನ ಭಾರಿ ಉತ್ಸಾಹ ತೋರಿರುವ ಅವರು ಜನರಲ್ಲಿ ದೈಹಿಕಕ್ಷಮತೆಯ ಮಹತ್ವ ತಿಳಿಸಲು ಸಾಹಸವೊಂದನ್ನು ಮಾಡಿದ್ದಾರೆ. #fitindia #FitIndiaMovement ಹ್ಯಾಷ್​ಟ್ಯಾಗ್​ ಮೂಲಕ ಅವರು ತಮ್ಮ ದೈಹಿಕಕ್ಷಮತೆಯ ಪ್ರದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನಿಂತಿದ್ದ ವ್ಯಕ್ತಿಯೊಬ್ಬರ ಹಿಂದಿನಿಂದ ಓಡಿಬಂದು ಅವರ ತಲೆಯ ಮೇಲಿನಿಂದ ಜಿಗಿದು ಮುಂದಕ್ಕೆ ಬರುವ ಈ ವಿಡಿಯೋವನ್ನು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಪೋಸ್ಟ್ ಮಾಡಿದ್ದು, ಐದೇ ಗಂಟೆಗಳಲ್ಲಿ ಅದು 15 ಸಾವಿರ ವೀಕ್ಷಣೆ ಕಂಡಿದ್ದು, 3800ಕ್ಕೂ ಅಧಿಕ ಮಂದಿ ಅದನ್ನು ಮೆಚ್ಚಿದ್ದಾರೆ. ಮಾತ್ರವಲ್ಲ, 200 ಅಧಿಕ ಜನರು ಹಂಚಿಕೊಂಡಿದ್ದಾರೆ.