ರಾಮನಗರ: ವ್ಯಕ್ತಿಯೊಬ್ಬ ರಸ್ತೆ ಮಧ್ಯವೇ ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಮನಗರ ಜಿಲ್ಲೆ ಅರಳಿಮರದೊಡ್ಡಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಆನಮಾನಹಳ್ಳಿ ನಿವಾಸಿ ಸತೀಶ್ ಕೊಲೆ ಆರೋಪಿ.
ಸತೀಶ್ ಪತ್ನಿ ಮಂಗಳಗೌರಿ (28) ಕೊಲೆಯಾದ ಮಹಿಳೆ. ಕಳೆದ ಒಂದು ವಾರದ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದ ಮಂಗಳಗೌರಿ, ಬಳಿಕ ರಾಮನಗರ ಮಧುರಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು.
ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ತಂದೆ!; ಬಳಿಕ ಶವ ಮನೆಯಲ್ಲಿಟ್ಟು ಜಮೀನಿಗೆ ತೆರಳಿ ಕೃಷಿಯಲ್ಲಿ ತೊಡಗಿದ..
ಇಂದು ಸಂಜೆ ಮಂಗಳಗೌರಿ ಕೆಲಸ ಮುಗಿಸಿಕೊಂಡು ಗಾರ್ಮೆಂಟ್ಸ್ನಿಂದ ಮನೆಗೆ ಹೋಗುತ್ತಿದ್ದ ವೇಳೆ, ಗಾರ್ಮೆಂಟ್ಸ್ ಬಸ್ ಹಿಂಬಾಲಿಸಿಕೊಂಡು ಬಂದ ಸತೀಶ್, ಚಾಕುವಿನಿಂದ ಪತ್ನಿಯ ಕತ್ತು ಕೊಯ್ದಿದ್ದಾನೆ.
ಕೊಲೆ ಮಾಡಿದ ಬಳಿಕ ಸತೀಶ್ ಅಲ್ಲಿಂದ ಪರಾರಿಯಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಮಂಗಳಗೌರಿಯ ಶವವನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.