ಪುತ್ರ ಚಲುವರಾಜು 
ಜಿಲ್ಲೆ

ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ತಂದೆ!; ಬಳಿಕ ಶವ ಮನೆಯಲ್ಲಿಟ್ಟು ಜಮೀನಿಗೆ ತೆರಳಿ ಕೃಷಿಯಲ್ಲಿ ತೊಡಗಿದ..

Webdesk - Ravikanth

ಮೈಸೂರು: ತಂದೆ ಮಗನನ್ನು ಅಥವಾ ಮಗ ತಂದೆಯನ್ನು ಕೊಲೆ ಮಾಡಿದಂಥ ತೀರಾ ಅಮಾನವೀಯ ಪ್ರಕರಣಗಳ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಇಲ್ಲೊಬ್ಬ ತಂದೆ ಮಗನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಮೈಸೂರಿನ ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ಸಂಭವಿಸಿದೆ. ಸ್ವಾಮಿ ಅಲಿಯಾಸ್ ಚಲುವರಾಜು ಎಂಬಾತ ತಂದೆಯಿಂದೇ ಕೊಲೆಯಾದ ಪುತ್ರ. ಸಿದ್ದರಾಜು ಮಗನನ್ನೇ ಕೊಂದ ಆರೋಪ ಎದುರಿಸುತ್ತಿದ್ದಾನೆ.

ಗುರುವಾರ ರಾತ್ರಿಯೇ ಈ ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಮಗನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ತಂದೆ ಶವವನ್ನು ಮನೆಯಲ್ಲೇ ಇರಿಸಿ, ಜಮೀನಿಗೆ ತೆರಳಿ ಕೃಷಿಯಲ್ಲಿ ತೊಡಗಿದ್ದ.

ಅಕ್ಕಪಕ್ಕದ ಮನೆಯವರಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಶವವನ್ನು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕೊಲೆಗೆ ಕಾರಣ ಏನು ಎಂಬುದು ಇನ್ನೂ ಖಚಿತಗೊಂಡಿಲ್ಲ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.