ಜಿಲ್ಲೆ

ಅವನನ್ನು ಲವ್​ ಮಾಡ್ಬೇಡ ಅಂದ್ರೂ ಕೇಳದ ಮಗಳನ್ನು ಕೊಲೆ ಮಾಡಿದ ಅಪ್ಪ; ವೇಲ್​​ನಿಂದ ಕತ್ತು ಸುತ್ತಿ ಸಾಯಿಸಿದ..

ಚಿಕ್ಕಮಗಳೂರು: ಪ್ರೀತಿಸಿದ ಈ ಯುವತಿಯ ಪಾಲಿಗೆ ತಂದೆಯೇ ಮಾರಣಾಂತಿಕವಾಗಿ ಪರಿಣಮಿಸಿದ್ದಾನೆ. ಪ್ರಿಯಕರನನ್ನು ಬಿಟ್ಟು ಬಿಡು ಎಂದು ಹೇಳಿದರೂ ಕೇಳದ ಮಗಳು ಕೊನೆಗೆ ಪ್ರಾಣವನ್ನೇ ಬಿಡುವಂತೆ ಮಾಡಿದ್ದಾನೆ ಈ ಅಪ್ಪ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಕಡೂರು ತಾಲೂಕಿನ ಬೀರೂರು ನಿವಾಸಿ ರಾಧಾ (18) ಕೊಲೆಗೀಡಾದ ಮಗಳು. ತಂದೆ ಚಂದ್ರಪ್ಪನೇ ಆರೋಪಿ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕೆಂಚೇಗೌಡನ ಕೊಪ್ಪಲಿನ ನಿವಾಸಿಯಾಗಿರುವ ಚಂದ್ರಪ್ಪ, ಕೊಲೆ ಮಾಡಿ ಗ್ರಾಮಕ್ಕೆ ತೆರಳಿದ್ದ.

ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿರುವುದಾಗಿ ಚಂದ್ರಪ್ಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.