ನೆಲಮಂಗಲ: ಮೊನ್ನೆಮೊನ್ನೆಯಷ್ಟೇ ಶಾಸಕರೊಬ್ಬರ ಮೊಮ್ಮಗಳು ತಮ್ಮನ ಸಾವನ್ನು ಕಂಡು, ಅದೇ ಸ್ಥಳದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಂದು ವ್ಯಕ್ತಿಯೊಬ್ಬರು ಅಣ್ಣನ ಅಗಲಿಕೆಯಿಂದ ನೊಂದು ನೇಣಿಗೆ ಕೊರಳೊಡ್ಡಿದ್ದಾರೆ.
ಇದನ್ನೂ ಓದಿ: ಹಾವೇರಿ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳ ಆತ್ಮಹತ್ಯೆ; ತಮ್ಮ ಸತ್ತ ಸ್ಥಳದಲ್ಲೇ ನೇಣು ಹಾಕಿಕೊಂಡ ಅಕ್ಕ..
ನೆಲಮಂಗಲ ನಗರದ ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ನಾರಾಯಣ (52) ಎಂಬವರು ಸಾವಿಗೀಡಾಗಿದ್ದಾರೆ. ಇವರು ಇತ್ತೀಚೆಗೆ ಅಗಲಿರುವ ಅಣ್ಣನ ಅಗಲಿಕೆಯ ನೋವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಹೊತ್ತಿ ಉರಿಯಿತು ಪೆಟ್ರೋಲ್ ಬಂಕ್ ಪಕ್ಕದಲ್ಲೇ ಇದ್ದ ಗೋದಾಮು!
ಇವರು ತಮಗೆ ಸೇರಿರುವ ಶೆಡ್ನಲ್ಲಿನ ಆ್ಯಂಗಲ್ಗೆ ಹಗ್ಗ ಬಿಗಿದು ನೇಣು ಹಾಕಿಕೊಂಡಿದ್ದಾರೆ. ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ನೆಲಮಂಗಲ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.