ಪಡುಬಿದ್ರಿ ಮಧ್ವನಗರ ತರಂಗಿಣಿ ಮಿತ್ರ ಮಂಡಳಿಯ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಕುಡುಪು ನರಸಿಂಹ ತಂತ್ರಿ, ರಾಮಚಂದ್ರ ಉಪಾಧ್ಯಾಯ, ಪಿ. ಭವಾನಿಶಂಕರ ಹೆಗ್ಡೆ ಮೊದಲಾದವರಿದ್ದರು 
ಜಿಲ್ಲೆ

ಯಕ್ಷೋತ್ಸವದಲ್ಲಿ ಸಾಧಕರಿಗೆ ಸನ್ಮಾನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮಧ್ವನಗರ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ 18ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು. ಪಡುಬಿದ್ರಿ ಮೆಸ್ಕಾಂನ ಒಂಬತ್ತು ಲೈನ್‌ಮ್ಯಾನ್‌ಗಳಿಗೆ ಗೌರವಧನ ಸಹಿತ ಅಭಿನಂದಿಸಲಾಯಿತು.

ಹಿರಿಯ ವೈದಿಕ ವಿದ್ವಾನ್ ಕುಡುಪು ನರಸಿಂಹ ತಂತ್ರಿ, ರಾಮಚಂದ್ರ ಉಪಾಧ್ಯಾಯ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಪಿ.ಭವಾನಿಶಂಕರ ಹೆಗ್ಡೆ, ಇನ್ನಾ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಕಾರ್ತಿಕ್ ಎರ್ಮಾಳು, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘ ನಿರ್ದೇಶಕ ರಾಜಾರಾಮ ರಾವ್, ತರಂಗಿಣಿ ಮಿತ್ರ ಮಂಡಳಿ ಗೌರವಾಧ್ಯಕ್ಷ ಪಿ. ಸುಧಾಕರ ರಾವ್, ಅಧ್ಯಕ್ಷ ರಮಾಕಾಂತ ರಾವ್, ಕಾರ್ಯದರ್ಶಿ ವೈ.ಎಸ್.ಗಣೇಶ್ ರಾವ್, ಕೋಶಾಧಿಕಾರಿ ಗೋವಿಂದ ರಾವ್, ಕಾರ್ಯಕ್ರಮ ಸಂಘಟಕ ರಾಜೇಶ್ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗಾಗಿ ಪಾಜಕ ಮಾಧವ ಉಪಾಧ್ಯಾಯರಿಗೆ ತರಂಗಿಣಿ ವೈದಿಕ ರತ್ನ ಪ್ರಶಸ್ತಿ, ಪಾಕ ತಜ್ಞ ಬೆಳ್ಮಣ್ ಶ್ರೀಧರ ಭಟ್ ತರಂಗಿಣಿ ಪಾಕರತ್ನ ಪ್ರಶಸ್ತಿ, ಯಕ್ಷ ಕಲಾವಿದರಾದ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮವ್ವಾರು ಬಾಲಕೃಷ್ಣ ಮಣಿಯಾಣಿ, ಸಂತೋಷ್ ಕುಮಾರ್ ಹಿಲಿಯಾಣ ಅವರಿಗೆ ಯಕ್ಷ ರತ್ನ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು.