ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ಬಿಸಿಎ ವಿಭಾಗದಿಂದ ಎನಿಗ್ಮಾ- 2024 ಕಾರ್ಯಕ್ರಮ ನಡೆಯಿತು. ಸುಧೀರ್ ಕೆ.ಎನ್., ಸ್ವೀಡಲ್ ರೋಡ್ರಿಗಸ್, ಅಲೆಕ್ಸ್ ಐವನ್ ಸಿಕ್ವೇರಾ ಮತ್ತಿತರರು ಇದ್ದರು. 
ಜಿಲ್ಲೆ

ಸೇಕ್ರೆಡ್ ಹಾರ್ಟ್ ಕಾಲೇಜು ಎನಿಗ್ಮಾ-24

ಸೌಮ್ಯ ಆರ್

ಬೆಳ್ತಂಗಡಿ: ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಬಿಸಿಎ ವಿಭಾಗದಿಂದ ಎನಿಗ್ಮಾ- 2024 ಆಯೋಜಿಸಲಾಯಿತು.

ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಜೆಸಿಐ ವಲಯ ತರಬೇತುದಾರ ಸುಧೀರ್ ಕೆ.ಎನ್. ಕಂಪ್ಯೂಟರ್ ಅಪ್ಲಿಕೇಶನ್ ಪ್ರಪಂಚದ ಹೊಸ ಪ್ರವೃತ್ತಿಗಳ ಕುರಿತು ವಿವರಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಎನಿಗ್ಮಾ-2024ಗೆ ನೀಡಿದ ಕೊಡುಗೆಗಳಿಗಾಗಿ ಮುಖ್ಯ ಅತಿಥಿ ಗೌರವಿಸಿದರು. ಉಪನ್ಯಾಸಕಿ ಸ್ವೀಡಲ್ ರೋಡ್ರಿಗಸ್, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾ, ಬಿಸಿಎ ವಿಭಾಗದ ಮುಖ್ಯಸ್ಥ ಜನಾರ್ದನ ರಾವ್ ಡಿ, ಎನಿಗ್ಮಾ-2024 ರ ವಿದ್ಯಾರ್ಥಿ ಸಂಯೋಜಕ ಯುನಿತ್ ಕೆ ಉಪಸ್ಥಿತರಿದ್ದರು.

ಐಟಿ ಫೋರಂನ ಸಂಯೋಜಕಿ ಹಾಗೂ ಉಪನ್ಯಾಸಕಿ ವಿಯೋಲ ಸೆರಾವೊ ಸ್ವಾಗತಿಸಿದರು. ಎನಿಗ್ಮಾ 2024ರ ವಿದ್ಯಾರ್ಥಿ ಸಂಯೋಜಕ ರಾಬಿನ್ ಆಗಸ್ಟಿನ್ ವಂದಿಸಿದರು. ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹೀಬಾ ಮತ್ತು ಸೃಜನ್ ಕಾರ್ಯಕ್ರಮ ನಿರೂಪಿಸಿದರು.