ಬಿಂದು ವಿಶಾಲ ಸಾಗರವಾಗಿ ಬೆಳೆಯಲಿ

bindu
ಬಿಂದು ಜ್ಯುವೆಲ್ಲರಿ ಸುಳ್ಯ ಶಾಖೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ನಟ ಅರ್ಜುನ್ ಕಾಪಿಕಾಡ್, ನಟಿ ವಿಕೀಷಾ ರಾವ್, ಆಡಳಿತ ನಿರ್ದೇಶಕ ಅಭಿಲಾಷ್ ಮೊದಲಾದವರಿದ್ದರು.
Published on

ಸುಳ್ಯ: ಆಭರಣ ಉದ್ಯಮದಲ್ಲಿ ಅತ್ಯುನ್ನತ ಹೆಸರು ಗಳಿಸಿದ ಹಾಗೂ ಕಾಸರಗೋಡಿನಲ್ಲಿ 42 ವರ್ಷಗಳಿಂದ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿಯ ಮೂರನೇ ಶಾಖೆ ಸುಳ್ಯ ಪೊಲೀಸ್ ಠಾಣೆಯ ಮುಂಭಾಗದ ನೂತನ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬಿಂದು ಸುಳ್ಯ ಶಾಖಾ ಮಳಿಗೆ ಉದ್ಘಾಟಿಸಿ ಮಾತನಾಡಿ, ಕಾಸರಗೋಡಿನ ಬಿಂದು ಜ್ಯುವೆಲ್ಲರಿ ಇದೀಗ ಸುಳ್ಯದಲ್ಲಿ ಆರಂಭಗೊಂಡಿರುವುದು ಸುಳ್ಯದ ಜನತೆಗೆ ಶುಭ ಸುದ್ದಿ. ಸಂಸ್ಥೆಯ ಬಿಂದು ಮುಂದೆ ಸಾಗರವಾಗಿ ಹರಿಯಲಿ. ಇಲ್ಲಿನ ಜನರು ಕಾಸರಗೋಡಿಗೆ ಚಿನ್ನ ಖರೀದಿಗೆ ತೆರಳುವ ಬದಲು ಸುಳ್ಯದ ಬಿಂದು ಜ್ಯುವೆಲ್ಲರಿಯಲ್ಲಿಯೇ ತಮಗಿಷ್ಟದ ಚಿನ್ನಾಭರಣ ಖರೀದಿಸಲಿದ್ದಾರೆ. ಹೆಚ್ಚು-ಹೆಚ್ಚು ಮಹಿಳೆಯರು ಚಿನ್ನ ಧರಿಸುವಂತಾಗಲಿ ಎಂದರು.

ಚಲನಚಿತ್ರ ನಟ ಮತ್ತು ನಿರ್ದೇಶಕ ಅರ್ಜುನ್ ಕಾಪಿಕಾಡ್ ಹಾಗೂ ನಟಿ ವಿಕೀಷಾ ರಾವ್ ಸಂಸ್ಥೆಗೆ ಶುಭಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಅಭಿಲಾಷ್ ಮಾತನಾಡಿದರು. ಆಡಳಿತ ನಿರ್ದೇಶಕ ಡಾ.ಅಜಿತೇಶ್, ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ಮದರ್ ಥೆರೆಸಾ ಚರ್ಚ್‌ನ ಧರ್ಮಗುರು ಕ್ರಿಸ್ಟಿನ್, ಉದ್ಯಮಿ ಕೃಷ್ಣ ಕಾಮತ್, ಸುಳ್ಯ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ.ಮುಸ್ತಫಾ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಎನ್.ಎ.ರಾಮಚಂದ್ರ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಸುಳ್ಯ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಉದ್ಯಮಿ ಆದಂ ಹಾಜಿ ಕಮ್ಮಾಡಿ, ನಪಂ ಸದಸ್ಯರಾದ ಕಿಶೋರಿ ಶೇಟ್, ರಾಜು ಪಂಡಿತ್, ನಪಂ ಮಾಜಿ ಸದಸ್ಯ ಗೋಕುಲ್ ದಾಸ್, ಸಂಕೀರ್ಣ ಮಾಲೀಕ ರಮೇಶ್ ಸೋಮಯಾಗಿ ಮತ್ತಿತರರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಬಿಂದು ಜ್ಯುವೆಲ್ಲರಿ ಕಳೆದ 42 ವರ್ಷಗಳಿಂದ ಕಾಸರಗೋಡಿನಲ್ಲಿ ಗ್ರಾಹಕರ ಸಹಕಾರದಲ್ಲಿ ಉತ್ತಮವಾಗಿ ಮುಂದುವರಿದು ಮನೆ ಮಾತಾಗಿದೆ. ಇದೀಗ ಸುಳ್ಯದಲ್ಲೂ ಸಂಸ್ಥೆ ಆರಂಭಗೊಂಡಿದ್ದು, ಇಲ್ಲಿನ ಗ್ರಾಹಕರ ಸಹಕಾರ ನಮಗೆ ಮುಖ್ಯ. ಮುಂದೆ ಮಂಗಳೂರಿನಲ್ಲೂ ಶಾಖೆ ಆರಂಭಿಸುತ್ತೇವೆ.- ಅಭಿಲಾಷ್, ಸಂಸ್ಥೆಯ ಆಡಳಿತ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net