ಜಿಲ್ಲೆ

ನವವಿವಾಹಿತ ಬರ್ಬರ ಹತ್ಯೆ: 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವಳ ಬಾಳಿಗೆ ಅಣ್ಣ-ಚಿಕ್ಕಪ್ಪನೇ ವಿಲನ್​!

arunakunigal

ಬೆಂಗಳೂರು: ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ನವವಿವಾಹಿತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಚೇತನ್ (25) ಕೊಲೆಯಾದವ. ಎರಡು ತಿಂಗಳ ಹಿಂದಷ್ಟೇ ಭೂಮಿಕಾ ಜತೆ ಚೇತನ್​ ಮದುವೆ ಆಗಿದ್ದ. ಪ್ರೀತಿಸಿ ಮದ್ವೆ ಆಗಿದ್ದ ಇವರಿಬ್ಬರೂ ಲಗ್ಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಬರ್ತ್​ ಡೇಗೆ ವಿಶ್​ ಮಾಡೋ ನೆಪದಲ್ಲಿ ಮನೆಗೆ ಮಂಗಳವಾರ ಚೇತನ್​ ಮನೆಗೆ ಭೂಮಿಕಾಳ ತಮ್ಮ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಬಂದಿದ್ದರು. ತಮ್ಮ-ಚಿಕ್ಕಪ್ಪನೇ ತನ್ನ ಗಂಡನ್ನು ಪ್ರಾಣ ತೆಗೆಯುತ್ತಾರೆ ಎಂದು ಕನಸಲ್ಲೂ ಎಣಿಸದ ಭೂಮಿಕಾ, ತವರಿನವರು ಮನೆ ಬಂದ ಖುಷಿಯಲ್ಲಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಇದನ್ನೂ ಓದಿರಿ ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

ಭೂಮಿಕಾ ಮತ್ತು ಚೇತನ್​ ಪ್ರೀತಿ ಮಾಡಿ ಮದ್ವೆ ಆಗಿದ್ದು ಆಕಾಶ್-ನಂಜೇಗೌಡ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಭೂಮಿಕಾ ಮೊದಲ ಗಂಡನನ್ನ ಬಿಟ್ಟು ಚೇತನ್​ ಜತೆ ಬಂದಿದ್ದಳು. ಇದೇ ವಿಚಾರಕ್ಕೆ ಚೇತನ್​ ಮೇಲೆ ಸೇಡು ತೀರಿಸಿಕೊಳ್ಳಲೆಂದು ಸಂಚು ರೂಪಿಸಿದ್ದ ಅವರು, ಮಂಗಳವಾರ ಮಧ್ಯಾಹ್ನ ಚೇತನ್ ಕುತ್ತಿಗೆಯನ್ನ ಚಾಕುವಿನಿಂದ ಕೊಯ್ದು ಹತ್ಯೆ ಮಾಡಿದ್ದಾರೆ.

ಬಾಮೈದ ಹಾಗೂ ಮಾವನಿಂದಲೇ ಕೊಲೆಯಾದ ಚೇತನ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಾಜಗೋಪಾಲ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.