ಕನ್ಯಾನದ ಶಿವರಾಮರ ಮನೆಗೆ ಮರ ಬಿದ್ದು ಹಾನಿಯಾಗಿರುವುದು 
ಜಿಲ್ಲೆ

ಮಳೆಯಿಂದ ಮರ ಬಿದ್ದು ನಷ್ಟ

ಇಂದಿರಾ ಎನ್ ಕೆ

ಗಂಗೊಳ್ಳಿ: ಭಾನುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಹಲವರ ಮನೆ ಮೇಲೆ ಮರ ಬಿದ್ದಿದ್ದು, ಅಪಾರ ನಷ್ಟ ಉಂಟಾಗಿದೆ.
ಕನ್ಯಾನ ಗ್ರಾಮದ ಶಿವರಾಮ ಎಂಬುವರ ಮನೆ ಮೇಲೆ ಮರ ಬಿದ್ದು ನಷ್ಟವುಂಟಾಗಿದೆ. ತೆಕ್ಕಟ್ಟೆ ಗ್ರಾಮದ ಲಕ್ಷ್ಮೀ ಎಂಬುವರ ಮನೆ ಮೇಲೆ ತೆಂಗಿನ ಮರ ಉರುಳಿದೆ. ಗಂಗೊಳ್ಳಿ ಗ್ರಾಮದ ಸಾಂತಯ್ಯನ ಕೇರಿಯ ಸಕ್ಲಾತಿ ಕೇಶವ ಶೇರುಗಾರ ಎಂಬುವರ ಮನೆ ಮೇಲೂ ಮರ ಮುರಿದು ಬಿದ್ದು ನಷ್ಟ ಉಂಟಾಗಿದೆ. ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಕಡಲ್ಕೊರೆತ ಮುಂದುವರಿದಿದೆ.