ಜಿಲ್ಲೆ

ಹಿಲಿಯಾಣ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ

ಗೋಳಿಯಂಗಡಿ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಶಾಲೆಯಲ್ಲಿ ಆರಂಭಿಸಲಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಆವರ್ಸೆ ಗ್ರಾಪಂ ಸದಸ್ಯ ಎಚ್.ಚಿತ್ತರಂಜನ್‌ದಾಸ್ ಶೆಟ್ಟಿ ಹಿಲಿಯಾಣ ಹೇಳಿದರು.

ಹಿಲಿಯಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸೈನಿಕ ಆನಂದ ಶೆಟ್ಟಿ ಆವರ್ಸೆ ಕಲ್ಮನೆ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಆವರ್ಸೆ ಗ್ರಾಪಂ ಸದಸ್ಯ ಎಚ್.ಪ್ರಮೋದ್ ಹೆಗ್ಡೆ ಹಿಲಿಯಾಣ, ಉಷಾ ಸಿದ್ದಾರ್ಥ ನಾಯ್ಕ, ಹಿಲಿಯಾಣ ಎಜುಕೇಶನ್ ಟ್ರಸ್ಟ್ ವಿನಯಕುಮಾರ್ ಶೆಟ್ಟಿ ಇಸಾರಮಕ್ಕಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅನಿತಾ, ಬಂಡ್ಸಾಲೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಭಾರತಿ ಯು.ಶೆಟ್ಟಿ, ಕರುಣಾಕರ ಶೆಟ್ಟಿ ದಕ್ಕೇರ್‌ಬೆಟ್ಟು, ಸಿಂಡಿಕೇಟ್ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ವಿಜಯಕುಮಾರ್ ಶೆಟ್ಟಿ ಆವರ್ಸೆ, ಡಾ.ಸಂದೀಪ್ ಶೆಟ್ಟಿ, ಸಿದ್ದಾರ್ಥ ನಾಯ್ಕ ನರಿಕೊಡ್ಲು, ಯೋಗೇಂದ್ರ, ಸುರೇಂದ್ರ ಕುಲಾಲ್, ಪ್ರಶಾಂತ, ಕೃಷ್ಣ ನಾಯ್ಕ, ಸಂತೋಷ, ಸುಧೀರ ಹೆಗ್ಡೆ, ಪ್ರಕಾಶ ಶೆಟ್ಟಿ, ನಾಗ ನಾಯ್ಕ, ಶಿಕ್ಷಕಿಯರಾದ ಪದ್ಮಶ್ರೀ, ತೀರ್ಥ ಶೆಟ್ಟಿ, ಸ್ವಾತಿ, ಸುಮಿತ್ರಾ, ಜಯಂತಿ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.

ಎಲ್‌ಕೆಜಿ- ಯುಕೆಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಮಲ್ಲಿಕಾ ವಂದಿಸಿದರು.