ವಿಜಯಪುರ ನಗರದ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪಿಯು ವಿಜ್ಞಾನ ಕಾಲೇಜು- ಆಕ್ಸ್‌ಫರ್ಡ್ ಐಐಟಿ ಓಲಂಪಿಯಾಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಧ್ವಜವಂದನೆ ಸಲ್ಲಿಸಿದರು. ಸಂಗಪ್ಪ ವಿ.ಎಚ್, ಬಸವರಾಜ ಕೌಲಗಿ, ಸಂಗಮೇಶ ಬಬಲೇಶ್ವರ ಇತರರಿದ್ದರು. 
ಜಿಲ್ಲೆ

ಯುವ ಜನತೆ ಸೈನ್ಯ ಸೇರಲು ಮುಂದಾಗಲಿ

ಗಿರೀಶ ಸಗರ

ವಿಜಯಪುರ : ಸಾವೇ ನನ್ನ ಸಂಗಾತಿ. ನನಗೇಕೆ ಮದುವೆಯೆಂದು ಬ್ರಿಟಿಷರ ವಿರುದ್ಧ ಹೋರಾಡಿದ ಭಗತಸಿಂಗ್ ನಮಗೆ ಅನುಕರಣೀಯವಾಗಿದ್ದಾರೆ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸಂಗಪ್ಪ ವಿ.ಎಚ್ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪಿಯು ವಿಜ್ಞಾನ ಕಾಲೇಜು ಹಾಗೂ ಆಕ್ಸ್‌ಫರ್ಡ್ ಐಐಟಿ ಓಲಂಪಿಯಾಡ್ ಶಾಲೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಎನ್‌ಸಿಸಿ ತರಬೇತಿ ಪಡೆಯಬೇಕು, ಯುವಕರು ಹೆಚ್ಚು ಹೆಚ್ಚು ಸೈನ್ಯ ಸೇರಬೇಕು. ನಿಸ್ವಾರ್ಥತೆಯಿಂದ ದೇಶ ಸೇವೆ ಸಲ್ಲಿಸಿದಾಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಅಮ್ಮನ ಮಡಿಲು ಚಾರಿಟಬಲ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಚಂದ್ರಯಾನದಲ್ಲಿ ಸಾಹಸ ಮೆರೆದ ಭಾರತೀಯರು ಜಾಗತಿಕವಾಗಿ ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಲಿ ಎಂದು ಹಾರೈಸಿದರು.

ಎಕ್ಸ್‌ಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಸ್ವಾತಂತ್ರೃ ದೊರೆತ ನಂತರದ ವರ್ಷಗಳ ಸಾಧನೆಯ ಅವಲೋಕನ ಜತೆಗೆ ಮುಂದಿನ 25 ವರ್ಷಗಳಲ್ಲಿ ನಮ್ಮ ಮುಂದಿರುವ ಗುರಿಗಳನ್ನು ಮುಟ್ಟುವ ಕುರಿತು ನಾವೆಲ್ಲರೂ ಗಂಭೀರ ಚಿಂತನೆ ಮಾಡುವುದು ಅವಶ್ಯ ಎಂದರು.

ನಿವೃತ್ತ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಮಾತನಾಡಿದರು. ನಿವೃತ್ತ ಕ್ಯಾ. ಜಗನ್ನಾಥ ಪಾಂಡ್ರೆ, ಸುಬೇದಾರ ಚಿನ್ನಪ್ಪ ಇಕ್ಕಳಕಿ, ಸಂಸ್ಥೆಯ ನಿರ್ದೇಶಕಿ ಪುಷ್ಪಾ ಬಿ. ಕೌಲಗಿ, ಕಾಲೇಜು ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಹಾಗೂ ಆಕ್ಸ್‌ಫರ್ಡ್ ಶಾಲೆ ಮುಖ್ಯಶಿಕ್ಷಕ ಜೆ.ಎಂ.ಇನಾಮದಾರ ಇತರರಿದ್ದರು.

ತಾಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಂಜನಾ ಪಾಟೀಲ ಪ್ರಾರ್ಥಿಸಿದರು. ಎಸ್.ಆರ್. ಪಾಟೀಲ ಸ್ವಾಗತಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲ ನಾಯಕ ನಿರ್ವಹಿಸಿದರು. ಜೆ.ಎಂ. ಇನಾಮದಾರ ವಂದಿಸಿದರು.