ಮನೆಗಳಲ್ಲಿ ನಿತ್ಯವೂ ಸ್ವಾತಂತ್ರ್ಯೋತ್ಸವ ನಡೆಯಲಿ

Let Independence Day be celebrated in homes every day
ಬಸವನಬಾಗೇವಾಡಿ ಬಸವೇಶ್ವರ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಜಿ.ಎಸ್. ನಾಯಕ, ಯುವರಾಜ ಹನಗಂಡಿ, ವಸಂತ ರಾಠೋಡ, ಜಿ.ಎಂ. ಕರುಣಾಕರಶೆಟ್ಟಿ ಇತರರಿದ್ದರು.
Published on

ಬಸವನಬಾಗೇವಾಡಿ: ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರೃ ದೊರೆತಿದೆ. ಅವರ ತ್ಯಾಗ ಬಲಿದಾನವನ್ನು ನಾವು ಎಂದು ಮರೆಯಬಾರದು ಎಂದು ತಹಸೀಲ್ದಾರ್ ಜಿ.ಎಸ್. ನಾಯಕ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ಶ್ರೀಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬ್ರಿಟಿಷ್‌ರ ವಿರುದ್ಧ ನಿರಂತರ ಹೋರಾಟ ಮಾಡಿದ ಫಲದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ನಿತ್ಯವು ನಮ್ಮ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವ ನಡೆಯಬೇಕು. ಅನ್ನದಾತ, ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ ಅವರಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ನಾವು ಕಾಣಬೇಕು ಎಂದರು.

ಪಥಸಂಚಲನ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಕಾರ್ಯಕ್ರಮ ಜರುಗಿತು. ಮಾಜಿ ಸೈನಿಕರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ತಾಲೂಕಾಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.

ಬೆಳಗ್ಗೆ 8ಕ್ಕೆ ತಾಲೂಕಿನಾದ್ಯಾಂತ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲೆ, ಕಾಲೇಜುಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ತಾಪಂ ಇಒ ಯುವರಾಜ ಹನಗಂಡಿ, ಕ್ಷೇತ್ರ ಶಿಕ್ಷಣಾಧಿಕಾರ ವಸಂತ ರಾಠೋಡ, ಡಿವೈಎಸ್‌ಪಿ ಜಿ.ಎಂ. ಕರುಣಾಕರಶೆಟ್ಟಿ, ಸಿಪಿಐ ಶರಣಗೌಡ ನ್ಯಾಮನ್ನವರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಇತರರಿದ್ದರು. ಪಿ.ಯು. ರಾಠೋಡ ಸ್ವಾಗತಿಸಿದರು. ಶಿವಾನಂದ ಮಡಿಕೇಶ್ವರ ನಿರೂಪಿಸಿದರು. ಬಿ.ವಿ. ಚಕ್ರಮನಿ, ಕೊಟ್ರೇಶ ಹೆಗಡ್ಯಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net