ಬೀದರ್: ಔರಾದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಸ್ ಕಂಡಕ್ಟರ್ ಅರುಣಕುಮಾರ ನೌಬಾದೆ(38) ಆತ್ಮಹತ್ಯೆ ಮಾಡಿಕೊಂಡವ. ಬೀದರ್ನ ಪ್ರತಾಪ್ ನಗರದ ಮನೆಯಲ್ಲಿ ಮಂಗಳವಾರ ಬೆಳಗಿನಜಾವ ನೇಣಿಗೆ ಬಿಗಿದುಕೊಂಡು ಸತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್ ಎರಡು ತಿಂಗಳ ಹಿಂದೆ ಅಮಾನತುಗೊಂಡಿದ್ದ. ಈ ಹಿಂದೆ ಬೀದರ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಬಳಿಕ ಔರಾದ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ಇಲಾಖೆ ಅಧಿಕಾರಿಗಳ ಕಿರುಕುಳವೋ? ಅಥವಾ ವೈಯಕ್ತಿಕ ಕಾರಣವೋ ಗೊತ್ತಾಗಿಲ್ಲ.
ಮೃತರಿಗೆ ಇಬ್ಬರು ಮಕ್ಕಳಿದ್ದು, ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.