ಜಿಲ್ಲೆ

ಕರೊನಾಗೆ ದೊರೆಗಳು, ಮಂತ್ರಿ, ನಾಯಕರು ಬಲಿಯಾಗಲಿದ್ದಾರೆ: ಕೋಡಿ ಮಠ ಶ್ರೀ ಭವಿಷ್ಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಸನ: ಮಹಾಮಾರಿ ಕರೊನಾ ವೈರಸ್​ ಇನ್ನಷ್ಟು ಮಂದಿಯನ್ನು ಬಲಿ ಪಡೆಯಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕರೊನಾ ಇನ್ನೂ ಮೂರು ತಿಂಗಳು ಕಾಡಲಿದೆ. ದೊರೆಗಳು, ಮಂತ್ರಿ ಹಾಗೂ ನಾಯಕರು ಕರೊನಾಗೆ ಬಲಿಯಾಗಲಿದ್ದಾರೆ. ಕಾರ್ಮೋಡದ ನಡುವೆ ಮಿಂಚು ಬಂದಂತೆ, ಕರೊನಾ ಮುಂದೆ ಒಳ್ಳೆಯ ವಿಚಾರಗಳನ್ನು ಕಲಿಸಲಿದೆ ಎಂದು ಹೇಳಿದರು.

ಇಡೀ ಜಗತ್ತು ದೈವವನ್ನು ನಂಬಿದೆ. ದೇವಾಲಯದ ಬಾಗಿಲು ಮುಚ್ಚಿ ಹೆಂಡದಂಗಡಿ ತೆರೆಯಲು ಬಿಟ್ಟಿದ್ದು ತಪ್ಪು. ಜನ ದೇವಸ್ಥಾನಕ್ಕೆ ಹೋಗದಿದ್ದರೂ ತೊಂದರೆ ಇಲ್ಲ. ಆದರೆ, ದೇವಾಲಯದ ಪೂಜೆ ನಿಲ್ಲಬಾರದಿತ್ತು. ಕಾರ್ತಿಕ ಆಶ್ವೀಜ ಮಾಸದಲ್ಲಿ ಕರೊನಾ ಹಳ್ಳಿಯಲ್ಲಿ ತಲ್ಲಣ ಗೊಳಿಸಲಿದೆ ಎಂದು ಹೇಳಿದ್ದಾರೆ.

ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಪರಿಣಾಮ ಮುಂದೆ ಇನ್ನೂ ಅತಿಯಾದ ಮಳೆ ಯಾಗಲಿದೆ. ಜಾಗತಿಕ ಮಟ್ಟದಲ್ಲಿ ರಾಜಕೀಯ ಭೀತಿ ಉಂಟಲಾಗಲಿದೆ. ದೊರೆಗಳು ಅಪಮಾನ ಅನುಭವಿಸಬೇಕಾದಿತು. ಜಗತ್ತಿನ ಮಟ್ಟದಲ್ಲೇ ರಾಜಭೀತಿ ಇದೆ. ನೀವೇ ಕಾದು ನೋಡುತ್ತಿರಿ. ಸ್ವಚ್ಚತೆ ಉತ್ತಮ ನಿಯಮ ಪಾಲನೆಯೇ ಕರೊನಾದಿದ ಪರಾಗಲು ದಾರಿ ಎಂದು ಶ್ರೀಗಳು ತಿಳಿಸಿದರು. (ದಿಗ್ವಿಜಯ ನ್ಯೂಸ್​)